ಆಪರೇಷನ್ ಮಾಡಲು ಬಂದ ವೈದ್ಯರು ತಾವೇ ಬೆಡ್ ನಲ್ಲಿ ಮಲಗಿದ್ರು: ವೈದ್ಯರು ಕುಡಿದ್ದರು ಎಂಬ ಗಂಭೀರ ಆರೋಪ!

ಚಿಕ್ಕಮಗಳೂರು: ಆಪರೇಷನ್ ಮಾಡಲು ಬಂದ ವೈದ್ಯರು ಕುಡಿದು ಚಿತ್ತಾಗಿದ್ದಾರೆ ಎಂದು ರೋಗಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಸಂತಾನಹರಣ ಆಪರೇಷನ್ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದ್ದು, ಆಪರೇಷನ್ ಮಾಡಲು ಬಂದ ವೈದ್ಯರು ಆಪರೇಷನ್ ಥಿಯೇಟರ್ ನಲ್ಲೇ ಮಲಗಿದ್ದಾರೆ ಎಂದು ಮಹಿಳೆಯರ ಕುಟುಂಬಸ್ಥರು ಆರೋಪಿಸಿದ್ದಾರೆ.
10ಕ್ಕೂ ಹೆಚ್ಚು ಮಹಿಳೆಯರು ಮಕ್ಕಳನ್ನ ಬಿಟ್ಟು ಬೆಳಗ್ಗೆ 8 ಗಂಟೆಗೆ ಶಸ್ತ್ರ ಚಿಕಿತ್ಸೆಗೆ ಬಂದಿದ್ದರು. ಕೊಪ್ಪ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ 3 ಗಂಟೆಗೆ ಆಗಮಿಸಿದ್ದು, ಆದರೆ ಸಂತಾನಹರಣ ಚಿಕಿತ್ಸೆ ಮಾಡಬೇಕಾದ ಆಪರೇಷನ್ ಬೆಡ್ ಮೇಲೆಯೇ ಅವರು ಮಲಗಿದ್ದಾರೆನ್ನಲಾಗಿದೆ.
ಈ ವೇಳೆ ಅಲ್ಲಿನ ಸಿಬ್ಬಂದಿ ವೈದ್ಯರಿಗೆ ಶುಗರ್ ಕಮ್ಮಿಯಾಗಿದೆ, ಬಿಪಿ ಹೆಚ್ಚಾಗಿದೆ ಎಂದು ಗ್ಲೂಕೋಸ್ ಹಾಕಿ, ವೈದ್ಯರನ್ನು ಅಲ್ಲಿಂದ ಆ್ಯಂಬುಲೆನ್ಸ್ ನಿಂದ ಕಳುಹಿಸಿದ್ದಾರೆ ಎಂದು ಮಹಿಳೆಯರ ಕುಟುಂಬಸ್ಥರು ಆರೋಪಿಸಿದ್ದಾರೆ.
ಒಂದೆಡೆ ಶಾಸ್ತ್ರ ಚಿಕಿತ್ಸೆ ನೀಡಲು ಮಹಿಳೆಯರಿಗೆ ಅನಸ್ತೇಷಿಯಾ ನೀಡಿದ್ದರೆ, ಇತ್ತ ವೈದ್ಯರು ತಾನು ಚಿಕಿತ್ಸೆ ನೀಡಬೇಕಾದ ಬೆಡ್ ನಲ್ಲೇ ಮಲಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw