2014ರಿಂದ ಈಚೆಗೆ  ಚುನಾವಣಾ ಆಯೋಗ ಬಿಜೆಪಿಗೆ ಮಾರಿಕೊಂಡಿದೆ: ದಿನೇಶ್ ಮೂಳೂರು - Mahanayaka

2014ರಿಂದ ಈಚೆಗೆ  ಚುನಾವಣಾ ಆಯೋಗ ಬಿಜೆಪಿಗೆ ಮಾರಿಕೊಂಡಿದೆ: ದಿನೇಶ್ ಮೂಳೂರು

dinesh muluru
06/08/2025


Provided by

2014 ರಿಂದ  ಈಚೆಗೆ ದೇಶದಲ್ಲಿ ಚುನಾವಣಾ ಆಯೋಗದ ಸ್ವಾಭಿಮಾನದ ಅಸ್ತಿತ್ವವನ್ನು ಕಳೆದುಕೊಂಡಿದೆ ಎಂಬುದನ್ನು  ಪ್ರತಿಯೊಂದು ವಿಧಾನಸಭಾ ಚುನಾವಣೆಗಳಲ್ಲಿ, ಲೋಕಸಭಾ ಚುನಾವಣೆಗಳಲ್ಲಿ  ಕಾಣಬಹುದಾಗಿದೆ, ಇದಕ್ಕೆ ಕಾರಣ  ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ  ಚುನಾವಣಾ ಆಯೋಗ  ತಮ್ಮ ಸ್ವಾಭಿಮಾನದ ಅಸ್ತಿತ್ವವನ್ನು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮಾರಿಕೊಂಡಿದೆ ಎಂಬುದನ್ನು  ಚುನಾವಣೆಯ ಫಲಿತಾಂಶಗಳನ್ನು ನೋಡಿದಾಗ ಗೊತ್ತಾಗುತ್ತದೆ, ಕಳೆದ 10 ವರ್ಷಗಳ ಹಿಂದೆ  ಇಂದಿನ ವಿರೋಧ ಪಕ್ಷದ ನಾಯಕರಾದ  ಶ್ರೀಯುತ   ರಾಹುಲ್ ಗಾಂಧಿಯವರು   ಅನೇಕ ಸಾರ್ವಜನಿಕ ಸಮಾವೇಶಗಳಲ್ಲಿ ಹಾಗೂ ಸಂಸತ್ತಿನ ಸದನದಲ್ಲಿ  ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮತ್ತು ಕೇಂದ್ರದ ಚುನಾವಣಾ ಆಯೋಗಕ್ಕೆ  ಪ್ರಶ್ನೆ ಮಾಡಿದ್ದಾರೆ, ಎಲ್ಲೋ ಒಂದು ಕಡೆಗೆ ಕೇಂದ್ರದ ಚುನಾವಣೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಗುಲಾಮವಾಗಿ  ಕೆಲವೊಂದು ಕೆಲಸ ನಿರ್ವಹಿಸುತ್ತಿದ್ದಾರೆ.  ಮತದಾರ EVM ಮಿಷನ್ ನಿಂದ ಕಳ್ಳತನಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಮತದಾನ ಕಳ್ಳತನ ಮಾಡುತ್ತಿದ್ದಾರೆ. ದೇಶದಲ್ಲಿ ಬ್ಯಾಲೆಟ್ ಪೇಪರ್  ಜಾರಿ ಮಾಡಬೇಕು ಎಂದು ಅನೇಕ ರೀತಿಯ  ಸಾರ್ವಜನಿಕ ಸಭೆಗಳಲ್ಲಿ ಧ್ವನಿ ಎತ್ತಿದರು. ಇದಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಆಗಲಿ  ಅಥವಾ ಕೇಂದ್ರದ ಚುನಾವಣಾ ಆಯೋಗವಾಗಲಿ  ಇವರ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ ಮತ್ತು  ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಕೇಂದ್ರ ಚುನಾವಣೆ ಆಯೋಗ ಮಾಡಲಿಲ್ಲ, ಇಲ್ಲಿ ಕಾಂಗ್ರೆಸ್ ಪಕ್ಷದ ಮತದಾನ ನೀಡುವ ಮತದಾರರಿದ್ದಾರೆ, ಅವರ ಮತದಾನವನ್ನು ಮತದಾರ ಪಟ್ಟಿಯಿಂದ ತೆಗೆಯುವಂತ ಕೆಲಸ  ಬಿಜೆಪಿ ನಾಯಕರುಗಳು ಮಾಡಿದ್ದಾರೆ, ಅದೇ ರೀತಿಯಾಗಿ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ  ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ  ನಕಲಿ ಮತದಾನದ ಓಟುಗಳನ್ನು  ಸೇರಿಸುವಂತೆ ಕೆಲಸ  ಚುನಾವಣಾ ಆಯೋಗ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಾ ಬಂದಿದ್ದಾರೆ.

ಈ ವಿಚಾರವಾಗಿ ಹಲವು ಬಾರಿ  ಇಂದಿನ  ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ  ಮಲ್ಲಿಕಾರ್ಜುನ ಖರ್ಗೆ ಯವರು EVM ಮಿಷನ್ ಬಗ್ಗೆ ನಮಗೆ ಗೊಂದಲಗಳಿವೆ  ಇದನ್ನು ಬ್ಯಾನ್ ಮಾಡಿ  ನಮಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡುವುದಕ್ಕೆ  ಅವಕಾಶ ಮಾಡಿಕೊಡಬೇಕೆಂದು ಕೇಂದ್ರದ ಚುನಾವಣೆಯಾಗಕ್ಕೆ ಮನವಿ ಪತ್ರಗಳನ್ನ ಮತ್ತು  ಅದೇ ರೀತಿ ಕೇಂದ್ರ ಸರ್ಕಾರಕ್ಕೆ  ಸಾಕಷ್ಟು ಬಾರಿ ಪ್ರಶ್ನೆಯನ್ನು ಮಾಡಿದ್ದಾರೆ, ಇದರ ಸಮಸ್ಯೆ ಇವತ್ತು ಅಣು ಬಾಂಬ್  ರೀತಿಯಲ್ಲಿ ಇವತ್ತು ದೊಡ್ಡ ಪ್ರಜಾಪ್ರಭುತ್ವವನ್ನು ಕೊಳ್ಳೆ ಹೊಡೆಯುವಂತಹ ವ್ಯವಸ್ಥೆಯನ್ನು  ಸಂವಿಧಾನದ ವಿರುದ್ಧವಾದ ರೀತಿಯಲ್ಲಿ ಇಂದು ಕೇಂದ್ರದ ಚುನಾವಣಾ ಆಯೋಗ  ರೂಪುಗೊಂಡಿರೋದು  ವಿಪರ್ಯಾಸವಾಗಿದೆ. ದೇಶದಲ್ಲಿ ಚುನಾವಣೆ ಆಯೋಗ ಸತ್ತಿದೆ, 2024ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಎಲ್ಲಿ ಬಿಜೆಪಿ ಪಕ್ಷದ ವಿರುದ್ಧ ಮತದಾನ ಇರುತ್ತೋ  ಅಲ್ಲಿ  ನಕಲಿ ಓಟುಗಳನ್ನು  ಸೇರಿಸುವಂತ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಾ ಬಂದಿದೆ, ಇದಕ್ಕೆ ಸಾಕ್ಷಿಯಾಗಿ ಮಹಾರಾಷ್ಟ್ರದಲ್ಲಿ ಮಧ್ಯ ಪ್ರದೇಶ್, ಗುಜರಾತ್ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಗೋವಾ, ದೆಹಲಿ ಈ ರೀತಿಯ ಹಲವು ರಾಜ್ಯಗಳಲ್ಲಿ  ಕೇಂದ್ರದ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡಿದ್ದಾರೆ, ಇದಕ್ಕೆ ಮತ್ತೊಂದು ಸಾಕ್ಷಿ ಕರ್ನಾಟಕದ ವಿಧಾನಸಭಾ ಕ್ಷೇತ್ರದ ಮಾದೇವಪುರ, ರಾಜಾಜಿನಗರ , ಬೆಂಗಳೂರು ಗ್ರಾಮಾಂತರ  ಈ ರೀತಿಯ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ  ಮತದಾನ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ, ಅಲ್ಲಿ ಮತದಾರರ ಭಾವಚಿತ್ರಗಳನ್ನು ಕಳ್ಳತನ ಮಾಡಿ, ಮತದಾರ ಪಟ್ಟಿಯಲ್ಲಿ ಡಿಲಿಟ್ ಆಗುವ ರೀತಿಯಲ್ಲಿ ಕೇಂದ್ರ ಚುನಾವಣೆ ಆಯೋಗ ಮಾಡಿದೆ, ಅಲ್ಲಿ ಬಿಜೆಪಿ ಪರವಾಗಿರುವ ನಕಲಿ ಓಟುಗಳನ್ನು ಪಟ್ಟಿಯನ್ನು ಸೇರಿಸಿದ್ದಾರೆ, ಇವುಗಳನ್ನು ಸಾಕ್ಷಿ ಸಮೇತ ಮತ್ತು ದಾಖಲೆಗಳ ಮೂಲಕ ದೇಶದಲ್ಲಿ ಬಿಡುಗಡೆಯಾದರೆ  ಒಂದು ದೊಡ್ಡ ಅಣು ಬಾಂಬ್  ರೀತಿಯಲ್ಲಿ  ಕೇಂದ್ರ ಚುನಾವಣಾ ಆಯೋಗ  ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಇವತ್ತು ಕಳೆದ  12 ವರ್ಷಗಳಿಂದ  ಕೇಂದ್ರದ ಬಿಜೆಪಿ ಸರ್ಕಾರ ಗೆಲ್ಲುವುದಕ್ಕೆ ಕೇಂದ್ರದ ಚುನಾವಣಾ ಆಯೋಗವೇ ಕಾರಣವಾಗಿದೆ, ಈ ಚುನಾವಣೆ ಆಯೋಗವು  ಆರ್ ಎಸ್ ಎಸ್  ವ್ಯಕ್ತಿಗಳು ಉದ್ಯೋಗಾವಕಾಶಗಳನ್ನು ಪಡೆದುಕೊಂಡು  ಕುತಂತ್ರ ಮಾರ್ಗಗಳನ್ನು ರೂಪಿಸುತ್ತಾ ಬರುತ್ತಿದ್ದಾರೆ.

ಇವತ್ತು ಸಾರ್ವಜನಿಕರು ಎಚ್ಚೆತ್ತು ಕೊಳ್ಳಬೇಕು  ದೇಶದ ನಾಗರಿಕರು ವಿದ್ಯಾವಂತರು ಎಚ್ಚೆತ್ತುಕೊಳ್ಳಬೇಕು, ನೀವು ನೀಡುತ್ತಿರುವ ಮತದಾನ ಯಾವ ಪಕ್ಷಕ್ಕೆ ಕೊಟ್ಟಿದ್ದೀರಾ  ಅದು ನಿಮ್ ಆ ಪಕ್ಷಕ್ಕೆ ಮತದಾನ ವೋಟ್ ಆಗಿದೆಯಾ ಇಲ್ಲವೇ ಎಂಬುದನ್ನು  ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕಾಗಿದೆ  ಆದ್ದರಿಂದ ಇಂದು ಬೃಹತ್ ಆದಂತಹ ಹೋರಾಟವನ್ನು  ಶ್ರೀಯುತ ರಾಹುಲ್ ಗಾಂಧಿಯವರು  ದೇಶಾದ್ಯಂತ ಪ್ರತಿಭಟನಾ ರ್ಯಾಲಿಯನ್ನು ಮಾಡುವುದಕ್ಕೆ ಸಿದ್ದರಾಗಿದ್ದಾರೆ  ಈ ಪ್ರತಿಭಟನ ರ್ಯಾಲಿಯನ್ನು ಇಂದು ಕರ್ನಾಟಕದಿಂದಲೇ ಪ್ರಾರಂಭ ಆಗ್ತಾ ಇದೆ, ಈ ರೀತಿಯಾಗಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ  ಪ್ರತಿಯೊಬ್ಬರು ಧ್ವನಿಯತೆ ಬೇಕಾಗಿದೆ, ಕೇಂದ್ರದ ಚುನಾವಣೆಯ ಆಯೋಗವು  ಸ್ವಾಭಿಮಾನದ ಅತ್ಯುತ್ತವನ್ನು ಉಳಿಸಬೇಕಾಗಿದೆ, ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ, ಈ ದೇಶದ ಸಂವಿಧಾನವನ್ನು ನಾವು ಸಂರಕ್ಷಣೆ ಮಾಡಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ