ದನದ ಕೊಟ್ಟಿಗೆಗೆ ನುಗ್ಗಿದ ಚಿರತೆಯನ್ನು ಅಟ್ಟಾಡಿಸಿದ ರೈತರು!! ಕರು ಬಲಿ
13/11/2023
ಚಾಮರಾಜನಗರ: ದನದ ಕೊಟ್ಟಿಗೆ ನುಗ್ಗಿದ ಚಿರತೆಯು ಕರುವನ್ನು ಬಲಿ ಪಡೆದ ಘಟನೆ ಚಾಮರಾಜನಗರ ತಾಲೂಕಿನ ಹಿರೇಬೇಗೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹಾದೇವಸ್ವಾಮಿ ಎಂಬವರ ಕೊಟ್ಟಿಗೆಗೆ ಮುಂಜಾನೆ 3.30 ರ ಸುಮಾರಿನಲ್ಲಿ ಚಿರತೆ ಎಂಟ್ರಿ ಕೊಟ್ಟು ಕರುವನ್ನು ಹೊತ್ತೊಯ್ಯಲು ಪ್ರಯತ್ನಿಸಿದೆ. ಹಸುಗಳ ಚೀರಾಟದಿಂದ ಎಚ್ಚೆತ್ತ ಮಹಾದೇವಸ್ವಾಮಿ ಮತ್ತು ಸಹೋದರರು ಚಿರತೆಯನ್ನೇ ಅಟ್ಟಾಡಿಸಿದ್ದಾರೆ.
ಕರುವನ್ನು ಕಾಪಾಡಬೇಕೆಂದು ದೊಣ್ಣೆಗಳನ್ನು ಹಿಡಿದು ಅಟ್ಟಾಟಿಡಿಸಿ ಚಿರತೆ ಓಡಿಸಿದರೂ ಕರು ಮೃತಪಟ್ಟಿದೆ. 15 ಸಾವಿರ ಮೌಲ್ಯದ ಕರು ಇದಾಗಿದ್ದು ಅರಣ್ಯ ಇಲಾಖೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆ ಬಳಿಕ ಅರಣ್ಯ ಇಲಾಖೆಯವರಿಗೆ ಫೋನ್ ಮಾಡಿದರೂ ಸ್ಪಂದಿಸಿಲ್ಲ ಎಂದು ರೈತರು ಕಿಡಿಕಾರಿದ್ದಾರೆ.




























