ವಸತಿ ಸಮುಚ್ಛಯದ ಎಂಟನೇ ಮಹಡಿಯಿಂದ ಹಾರಿ ಬಾಲಕಿ ಸಾವಿಗೆ ಶರಣು - Mahanayaka

ವಸತಿ ಸಮುಚ್ಛಯದ ಎಂಟನೇ ಮಹಡಿಯಿಂದ ಹಾರಿ ಬಾಲಕಿ ಸಾವಿಗೆ ಶರಣು

prajna
06/11/2023


Provided by

ಮಣಿಪಾಲ: ಬಾಲಕಿಯೊಬ್ಬಳು ವಸತಿ ಸಮುಚ್ಛಯದ ಎಂಟನೇ ಮಹಡಿಯಿಂದ ಹಾರಿ ಸಾವಿಗೆ ಶರಣಾದ  ಘಟನೆ ಮಣಿಪಾಲ ಸಮೀಪದ ಸರಳೇಬೆಟ್ಟುವಿನಲ್ಲಿ ನ.5ರಂದು ಬೆಳಗ್ಗೆ ನಡೆದಿದೆ.

ಸರಳೇಬೆಟ್ಟು ಹೈಪಾಯಿಂಟ್ ಹೈಟ್ಸ್ ವಸತಿ ಸಮುಚ್ಛಯದ ನಿವಾಸಿ ಕೃತಿಕಾ ಎಂಬವರ ಮಗಳು ಪ್ರಜ್ಞಾ(13) ಮೃತ ದುದೈರ್ವಿ. ಮಾನಸಿಕ ಖಿನ್ನೆತೆಗೆ ಒಳಗಾಗಿದ್ದ ಪ್ರಜ್ಞಾ ಜೀವನದಲ್ಲಿ ಜಿಗುಪ್ಸೆಗೊಂಡು, ತಮ್ಮ ಎಂಟನೇ ಮಹಡಿಯಲ್ಲಿರುವ ಫ್ಲಾಟ್‌ನ ಬಾಲ್ಕನಿಯಿಂದ ಕೆಳಗೆ ಹಾರಿದರೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ. ಈಕೆ ಮಣಿಪಾಲ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ