ಕೆಲಸ ಕೊಡಿಸುವುದಾಗಿ ನಂಬಿಸಿ 2 ಲಕ್ಷ ರೂ ದೋಚಿದ!: ಮಾಂಗಲ್ಯ ಸರ ಮಾರಿ ಹಣ ಕೊಟ್ಟ ಮಹಿಳೆ ಕಂಗಾಲು - Mahanayaka

ಕೆಲಸ ಕೊಡಿಸುವುದಾಗಿ ನಂಬಿಸಿ 2 ಲಕ್ಷ ರೂ ದೋಚಿದ!: ಮಾಂಗಲ್ಯ ಸರ ಮಾರಿ ಹಣ ಕೊಟ್ಟ ಮಹಿಳೆ ಕಂಗಾಲು

bengaluru 2
12/12/2023


Provided by

ಬೆಂಗಳೂರು: ಕೇಂದ್ರ ಸರ್ಕಾರದಡಿಯಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಕಲಿ ದಾಖಲೆಗಳನ್ನು ತೋರಿಸಿ ಮಹಿಳೆಯೊಬ್ಬರಿಗೆ 2 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬಯಲಾಗಿದೆ. ಬೆಂಗಳೂರಿನ ನಿವಾಸಿಯಾಗಿರುವ ಗಾಯತ್ರಿ ಎಂಬವರು ವಂಚಕರ ಸಂಚಿನಿಂದಾಗಿ ಹಣ ಕಳೆದು ಕೊಂಡವರಾಗಿದ್ದಾರೆ.

ಗಾಯತ್ರಿ ಅವರ ಪುತ್ರ ಹಾಗೂ ತಂಗಿಗೆ ಉದ್ಯೋಗ ಹುಡುಕಾಟ ನಡೆಸಲಾಗುತ್ತಿತ್ತು. ಈ ವೇಳೆ ಸಂತೋಷ್ ಎನ್ನುವ ವ್ಯಕ್ತಿಯೋರ್ವ 2 ಲಕ್ಷ ರೂಪಾಯಿ ಕೊಟ್ಟರೆ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದ.

ಆತ ತೋರಿಸಿದ್ದ ನಕಲಿ ಅಪಾಯಿಂಟ್ ಮೆಂಟ್ ಲೆಟರ್ ಹಾಗೂ ಕೇಂದ್ರದ ಸೀಲ್ ಇರುವ ಐಡೆಂಟಿ ಕಾರ್ಡ್ ನ್ನು ನಂಬಿದ್ದ ಗಾಯತ್ರಿ ಅವರು ನಂಬಿ ಆತನಿಗೆ ತಮ್ಮ ಮಾಂಗಲ್ಯ ಸರವನ್ನು ಮಾರಾಟ ಮಾಡಿ 2 ಲಕ್ಷ ರೂಪಾಯಿ ಹಣ ನೀಡಿದ್ದರು.

ಹಣ ನೀಡಿದ ಬಳಿಕ ಸಂತೋಷ್ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ತಾವು ಮೋಸ ಹೋಗಿರೋದು ಅರಿವಾಗುತ್ತಿದ್ದಂತೆಯೇ ಗಾಯತ್ರಿ ಅವರು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ