ಕಾಶ್ಮೀರದಲ್ಲಿ ಪಂಡಿತರಿಗಿಂತ ಮುಸ್ಲಿಂಮರೇ ಹೆಚ್ಚು ಹತ್ಯೆಯಾಗಿದ್ದಾರೆ! - Mahanayaka

ಕಾಶ್ಮೀರದಲ್ಲಿ ಪಂಡಿತರಿಗಿಂತ ಮುಸ್ಲಿಂಮರೇ ಹೆಚ್ಚು ಹತ್ಯೆಯಾಗಿದ್ದಾರೆ!

kashmir files
15/03/2022

ವಿವೇಕ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರಿ ಫೈಲ್ಸ್’(The Kashmir Files)  ಚಿತ್ರದ ಕುರಿತು ಮತ್ತು ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತು ಕೇರಳ  ರಾಜ್ಯ ಕಾಂಗ್ರೆಸ್ ಘಟಕ ಮಾಡಿದ ಟ್ವೀಟ್ ಇದೀಗ ವ್ಯಾಪಕ ಚರ್ಚೆಗಳಿಗೆ ಕಾರಣವಾಗಿದೆ.


Provided by

“1990ರಿಂದ 2007ರವರೆಗೆ ಸುಮಾರು 399 ಕಾಶ್ಮೀರಿ ಪಂಡಿತರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಆದರೆ, ಇದೇ 17 ವರ್ಷದಲ್ಲಿ ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಗೀಡಾದ ಮುಸ್ಲಿಂಮರ ಸಂಖ್ಯೆ ಸುಮಾರು 15,000!” ಎಂದು ಕೇರಳ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇನ್ನು ಕಾಶ್ಮೀರದಲ್ಲಿ ಪಂಡಿತರ ವಲಸೆ ಶುರುವಾಗಿದ್ದು, 1990ರ ದಶಕದಲ್ಲಿ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು, ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್  ನೇತೃತ್ವದ ಸರ್ಕಾರ. ಆಗ ಮಾತ್ರ ಬಿಜೆಪಿ ಸುಮ್ಮನಿದ್ದು, ಈಗ ಹೊಸ ನಾಟಕವಾಡುತ್ತಿದೆ. ಆಗ ಕೇಂದ್ರದಲ್ಲಿ ಎರಡು ಬಾರಿ ಮತ್ತು ಕಾಶ್ಮೀರದಲ್ಲಿ ಒಂದು ಅಧಿಕಾರಕ್ಕೇರಿದ ಬಿಜೆಪಿ ಪಂಡಿತರನ್ನು ಕಾಶ್ಮೀರಕ್ಕೆ ಏಕೆ ಮರಳಿ ಕರೆತರಲಿಲ್ಲ? ಅವರಿಗೆ ಭದ್ರತೆ ಒದಗಿಸಲಿಲ್ಲ? ಇನ್ನು ಕಾಶ್ಮೀರದಲ್ಲಿ ಪಂಡಿತರ ಹತ್ಯೆಗಳಾಗುತ್ತಿದ್ದಾಗ, ಬಿಜೆಪಿ ಅಯೋಧ್ಯ ರಥಯಾತ್ರೆಯಲ್ಲಿ ತೊಡಗಿತ್ತು ಎಂದು ಕೇರಳ ಕಾಂಗ್ರೆಸ್ ಘಟಕ ಆರೋಪಿಸಿದೆ.

ಕೇರಳ ಕಾಂಗ್ರೆಸ್‍ನ ಈ ಟ್ವೀಟ್‍ ಗಳಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಟ್ವೀಟ್‍ ಗಳನ್ನು ಡಿಲೀಟ್ ಮಾಡಲಾಗಿದೆ. ವಿವೇಕ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರಿ ಫೈಲ್ಸ್’  ಚಿತ್ರ ಇಡೀ ದೇಶಾದ್ಯಂತ ನೋಡುಗರ ಗಮನ ಸೆಳೆಯುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯ ಸರ್ಕಾರಗಳು ಈ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೈಕೋರ್ಟ್ ತೀರ್ಪು ಅತ್ಯಂತ ಐತಿಹಾಸಿಕವಾಗಿದೆ: ಪ್ರಮೋದ್​ ಮುತಾಲಿಕ್

ಹಿಜಾಬ್​ ತೀರ್ಪು: ಬಿಜೆಪಿ ಮುಖಂಡರೊಂದಿಗೆ ಕೇಸರಿಬಾತ್​ ಸವಿದು ಸಂಭ್ರಮಿಸಿದ ಸಚಿವ ಈಶ್ವರಪ್ಪ

ತಾಯಿ ಸಾವನ್ನಪ್ಪಿದ್ದು ಗೊತ್ತಿಲ್ಲದೇ 4 ದಿನ ಅಮ್ಮನ ಮಡಿಲಲ್ಲೇ ಮಲಗಿದ್ದ ಮಗ

ಬರೀ ಟ್ವೀಟ್ ಮಾಡಿದರೆ ಪಕ್ಷ ಉಳಿಯಲ್ಲ: ಕಾಂಗ್ರೆಸ್ ಮುಖಂಡ ವೀರಪ್ಪ  ಮೊಯ್ಲಿ ಕಿಡಿ

ನಾಳೆಯಿಂದಲೇ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರು ತರಗತಿಗೆ ಬರಲಿ: ಶಾಸಕ ರಘುಪತಿ ಭಟ್

ಇತ್ತೀಚಿನ ಸುದ್ದಿ