ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್‌ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತ - Mahanayaka
4:05 AM Saturday 18 - October 2025

ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್‌ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತ

14/03/2025

ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್‌ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತ ಮಾಡುವ ಮೂಲಕ ಮಧುಮೇಹಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಎಂಪಾಗ್ಲಿಫ್ಲೋಜಿನ್‌ನ ಬೆಲೆ ಈ ಹಿಂದೆ 10 ಮಿಗ್ರಾಂ ಡೋಸೇಜ್ ರೂಪದ ಟ್ಯಾಬ್ಲೆಟ್‌ಗೆ 58.7 ರೂ. ಮತ್ತು 25 ಮಿಗ್ರಾಂಗೆ 71.1 ರೂ. ಇತ್ತು.


Provided by

ಪೇಟೆಂಟ್‌ ಅವಧಿ ಮುಗಿದ ಕಾರಣ ಹಲವಾರು ದೇಶೀಯ ಔಷಧ ತಯಾರಕರು ಜೆನೆರಿಕ್ ಮಾದರಿ ಬಿಡುಗಡೆ ಮಾಡುವುದಾಗಿ ಘೋಷಿಸಿವೆ. ಮಧುಮೇಹ ಔಷಧ ಎಂಪಾಗ್ಲಿಫ್ಲೋಜಿನ್‌ನ ಬೆಲೆ 90% ರಷ್ಟು ಕುಸಿದಿದೆ.

ಮ್ಯಾನ್‌ಕೈಂಡ್ ಫಾರ್ಮಾ, ಅಲ್ಕೆಮ್ ಲ್ಯಾಬೊರೇಟರೀಸ್, ಗ್ಲೆನ್‌ಮಾರ್ಕ್, ಕೊರೊನಾ ರೆಮಿಡೀಸ್ ಕೆಲವು ಕಂಪನಿಗಳನ್ನು ಬಿಡುಗಡೆ ಮಾಡಿದ್ದು, ಹೆಚ್ಚಿನ ಭಾರತೀಯ ರೋಗಿಗಳಿಗೆ ಈ ಔಷಧವನ್ನು ಕೈಗೆಟುಕುವಂತೆ ಮಾಡಿದೆ.
ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ಭಾರತದ ನಾಲ್ಕನೇ ಅತಿದೊಡ್ಡ ಕಂಪನಿಯಾದ ಮ್ಯಾನ್‌ಕೈಂಡ್ ಫಾರ್ಮಾ, 10 ಮಿಗ್ರಾಂ ಟ್ಯಾಬ್ಲೆಟ್‌ಗೆ 5.49 ರೂ. ಮತ್ತು 25 ಮಿಗ್ರಾಂ ಟ್ಯಾಬ್ಲೆಟ್‌ಗೆ 9.9 ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ಇದು 90% ಕ್ಕಿಂತ ಹೆಚ್ಚು ಅಗ್ಗವಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ