ಎಲೆಕ್ಟ್ರಿಷಿಯನ್​ ಕೈಗೆ ಸರಪಳಿ ಹಾಕಿದ ಅಂಗಡಿ ಮಾಲೀಕ: ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ..! - Mahanayaka
7:48 AM Saturday 31 - January 2026

ಎಲೆಕ್ಟ್ರಿಷಿಯನ್​ ಕೈಗೆ ಸರಪಳಿ ಹಾಕಿದ ಅಂಗಡಿ ಮಾಲೀಕ: ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ..!

11/06/2023

ಅಂಗಡಿ ಮಾಲೀಕನೊಬ್ಬ ಎಲೆಕ್ಟ್ರಿಷಿಯನ್​ ಕೈಗೆ ಸರಪಳಿ ಹಾಕಿ ಹಾಕಿ ತಳ್ಳುವ ಗಾಡಿಗೆ ಕಟ್ಟಿರುವ ಅಮಾನವೀಯ ಘಟನೆ ಜಾರ್ಖಂಡ್​ನ ಧನ್​ಬಾದ್​ನಲ್ಲಿ ನಡೆದಿದೆ.
ಎಲೆಕ್ಟ್ರಿಷಿಯನ್ ಒಂದು ಕೆಲಸ ಮಾಡಿಕೊಡುತ್ತೇನೆ ಅಂತಾ ಹೇಳಿ ಮುಂಗಡ 15 ಸಾವಿರ ರೂಪಾಯಿ ಪಡೆದಿದ್ದರಂತೆ. ಆದರೆ ಹಣ ತೆಗೆದು ಕೆಲವು ದಿನಗಳಿಂದ ಕಾಲ್​ ಕೂಡ ರಿಸೀವ್ ಮಾಡುತ್ತಿರಲಿಲ್ಲ.
ಹೀಗಾಗಿ ಕೋಪಗೊಂಡ ಅಂಗಡಿ ಮಾಲೀಕ ಆತನನ್ನು ಹುಡುಕಿ
ಎಲೆಕ್ಟ್ರಿಷಿಯನ್​ನ ಕೈಗೆ ಕೋಳ ಹಾಕಿ ಗಾಡಿಗೆ ಕಟ್ಟಿದ್ದಾರೆ.
ಬಳಿಕ ಪೊಲೀಸರು ಆಗಮಿಸಿದಾಗ ಇದ್ದ ವಿಚಾರವನ್ನು ಅಂಗಡಿ ಮಾಲೀಕ ವಿವರಿಸಿದ್ದಾರೆ, ಇದಾದ ಬಳಿಕ ಎಲೆಕ್ಟ್ರಿಷಿಯನ್​ ಬಳಿ ಕೇಳಿದಾಗ ಹೌದು ನನಗೆ ಅವರು ಹಣ ನೀಡಿದ್ದರು, ನಾನು ಕೆಲಸವನ್ನೂ ಮಾಡಿಲ್ಲ ಹಣವನ್ನೂ ವಾಪಸ್ ನೀಡಿರಲಿಲ್ಲ ಎಂದು ಒಪ್ಪಿಕೊಂಡಿದ್ದಾನೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ