ಭ್ರೂಣಹತ್ಯೆ ಮಾಡಲು 20 ರಿಂದ 25 ಸಾವಿರ ಚಾರ್ಜ್ ಮಾಡ್ತಿದ್ದ ಪಾಪಿಗಳು!

ಬೆಂಗಳೂರು: ಕಳೆದರಡು ದಿನಗಳ ಹಿಂದೆ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಪತ್ತೆ ಮಾಡಿದ್ದ ಭ್ರೂಣಹತ್ಯೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ.
ಕಳೆದ ಎರಡು ವರ್ಷದ ಆರೋಪಿಗಳ ಹತ್ಯೆ (ಗರ್ಭಪಾತ) ನಡೆಸಿ 5 ಕೋಟಿ ಹಣ ಸಂಪಾದನೆ ಮಾಡಿದ್ದರಂತೆ. ಭ್ರೂಣ ಯಾವುದು ಎಂದು ಪತ್ತೆ ಮಾಡಲು 20 ರಿಂದ 25 ಸಾವಿರ ರೂ. ಭ್ರೂಣ ಹೊರ ತೆಗೆಯಲು 20 ರಿಂದ 25 ಸಾವಿರ ಚಾರ್ಜ್ ಮಾಡಲಾಗಿತ್ತು. 100% ನಿಖರ ರಿಸಲ್ಟ್ ಕೊಡ್ತಾರೆ ಎಂಬ ಆಧಾರದ ಮೇಲೆ ಇವರಿಗೆ ಕಸ್ಟಮರ್ಸ್ ಕೂಡ ಹೆಚ್ಚಾಗುತ್ತಿದ್ದಾರಂತೆ.
ಕಳೆದ ಎರಡು ವರ್ಷಗಳಲ್ಲಿ 5 ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದಾರಂತೆ. ಈ ಬಗ್ಗೆ ಸುಳಿವು ಪಡೆದ ಪೊಲೀಸರು ಗರ್ಭಿಣಿಯ ಜೊತೆ ಹೋಗಿ ಸ್ಟಿಂಗ್ ಆಪರೇಷನ್ ಮಾಡಿದ್ದು, ಭ್ರೂಣ ಪತ್ತೆ ಜಾಗ ಪತ್ತೆ ಮಾಡಲು ಜಿಪಿಎಸ್ ಸಹ ಬಳಸಿ, ಗರ್ಭಿಣಿಯರಿದ್ದ ಕಾರಿಗೆ ಜಿಪಿಎಸ್ ಅಳವಡಿಸಿ ನಿಖರ ಲೊಕೇಶನ್ ಪತ್ತೆ ಮಾಡಿದ್ದರು.
ಆರೋಪಿ ನವೀನ್ ಪ್ರತೀ ಬಾರಿ ಆಲೆ ಮನೆಗಳು, ತೋಟದ ಮನೆಗಳ ಸ್ಥಳವನ್ನು ಚೇಂಜ್ ಮಾಡುತ್ತಿದ್ದಾರೆ. ಹೀಗಾಗಿ ಗರ್ಭಿಣಿಯರಿಗೆ ಜಿಪಿಎಸ್ ಅಳವಡಿಸಿದ್ದ ಆರೋಪಿಗಳು ಹೆಡೆಮುರಿಕಟ್ಟಿದ್ದಾರೆ.
ಮಗು ಯಾವುದು ಎಂದು ಪತ್ತೆ ಮಾಡಿ ಮೈಸೂರಿನ ಮಾತಾ ಆಸ್ಪತ್ರೆಗೆ ಈ ಗ್ಯಾಂಗ್ ಕಳುಹಿಸಲಾಗಿತ್ತು. ಶಿವನಂಜೇಗೌಡ, ವೀರೇಶ್, ನವೀನ್, ನಯನ್ ಬಂಧನದ ಬಳಿಕ ಮೈಸೂರು ಆಸ್ಪತ್ರೆ ವಿಚಾರ ಬಯಲಿಗೆ ಬಂದಿದೆ. ಸದ್ಯದ ತನಿಖೆಯನ್ನ ಮೆಡಿಕಲ್ ಪ್ರಕರಣಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಯಿದೆ.