ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕನಿಗೆ ಪೋಷಕರಿಂದ ಚಪ್ಪಲಿ ಏಟು! - Mahanayaka

ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕನಿಗೆ ಪೋಷಕರಿಂದ ಚಪ್ಪಲಿ ಏಟು!

tamilnadu
09/08/2023


Provided by

ವಿದ್ಯಾರ್ಥಿಗೆ ಹೊಡೆದ ಆರೋಪ ಹೊರಿಸಿ ಪೋಷಕರು ಶಿಕ್ಷಕರೊಬ್ಬರಿಗೆ ಚಪ್ಪಲಿಯಿಂದ ಥಳಿಸಿದ ಘಟನೆ  ತಮಿಳುನಾಡಿನ ತಿರುವಳ್ಳೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಶಿಕ್ಷಕ ಮೋಹನ್ ಬಾಬು ಎಂಬಾತ ಹಲ್ಲೆಗೊಳಗಾದ ಶಿಕ್ಷಕನಾಗಿದ್ದು, 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗೆ ಶಿಕ್ಷಕ ಥಳಿಸಿದ್ದು, ಪರಿಣಾಮವಾಗಿ ಕೈ ಊದಿಕೊಂಡಿದ್ದರೂ, ವಿದ್ಯಾರ್ಥಿಗೆ ಚಿಕಿತ್ಸೆಯೂ ನೀಡದೇ, ಮನೆಗೂ ಹೋಗಲು ಬಿಡದೇ ಶಾಲೆಯ ಆವರಣದಲ್ಲೇ ಬೆದರಿಸಿ ನಿಲ್ಲಿಸಲಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿ ಮನೆಗೆ ಬಂದಾಗಿ ಕೈ ಊದಿಕೊಂಡಿರುವುದನ್ನು ಗಮನಿಸಿದ ಪೋಷಕರು ಕೈಗೆ ಐಸ್ ಪ್ಯಾಕ್ ನೀಡಿ ಉಪಚರಿಸಿದ್ದಾರೆ. ಬಳಿಕ ನಡೆದ ಘಟನೆಯನ್ನು ವಿದ್ಯಾರ್ಥಿ ವಿವರಿಸಿದ್ದು, ಇದರಿಂದ ಆಕ್ರೋಶಗೊಂಡ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕನಿಗೆ ಸುತ್ತುವರಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿಕ್ಷಕ ಮೋಹನ್ ಬಾಬುನನ್ನು ರಕ್ಷಿಸಿ ಜನರನ್ನು ಚದುರಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ