ಶಾಲೆಗೆ ಕುಡಿದು ಬಂದ ಶಿಕ್ಷಕನಿಗೆ ಚಪ್ಪಲಿ, ಕಲ್ಲು ಎಸೆದು ಅಟ್ಟಾಡಿಸಿ ಓಡಿಸಿದ ಮಕ್ಕಳು! - Mahanayaka
2:26 PM Tuesday 18 - November 2025

ಶಾಲೆಗೆ ಕುಡಿದು ಬಂದ ಶಿಕ್ಷಕನಿಗೆ ಚಪ್ಪಲಿ, ಕಲ್ಲು ಎಸೆದು ಅಟ್ಟಾಡಿಸಿ ಓಡಿಸಿದ ಮಕ್ಕಳು!

chathisgada
26/03/2024

ಛತ್ತೀಸ್ ಗಡ: ದಿನಾ ಕುಡಿದು ಶಾಲೆಗೆ ಬರುತ್ತಿದ್ದ ಶಿಕ್ಷಕನಿಂದ ಬೇಸತ್ತ ವಿದ್ಯಾರ್ಥಿಗಳು ಚಪ್ಪಲಿ ಎಸೆದು ಶಿಕ್ಷಕನನ್ನು ಶಾಲೆಯಿಂದ ಓಡಿಸಿದ ವಿಡಿಯೋವೊಂದು ವೈರಲ್ ಆಗಿದೆ.

ಛತ್ತೀಸ್ ಗಡದ ಬಸ್ತರ್ ಜಿಲ್ಲೆಯ ಶಿಕ್ಷಕ ಪ್ರತಿದಿನ ಕಂಠಮಟ್ಟ ಕುಡಿದು ಶಾಲೆಗೆ ಬಂದು ಮಕ್ಕಳಿಗೆ ಕೆಟ್ಟದಾಗಿ ನಿಂದಿಸುತ್ತಾ ದುರ್ವರ್ತನೆ ತೋರುತ್ತಿದ್ದ. ಇಷ್ಟಾದರೂ ಶಾಲಾ ಆಡಳಿತ ಮಂಡಳಿ ಈತನ ವಿರುದ್ಧ ಕ್ರಮಕೈಗೊಳ್ಳಲು ವಿಫಲವಾಗಿತ್ತು.

ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಶಿಕ್ಷಕ ಮದ್ಯ ಸೇವಿಸಿ ಶಾಲೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಶಾಲೆಯ ಅಂಗಳದಲ್ಲೇ ಚಪ್ಪಲಿ, ಕಲ್ಲುಗಳಿಂದ ಅಟ್ಟಾಡಿಸಿ ಹೊಡೆದು ಸ್ಥಳದಿಂದ ಓಡಿಸಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನೊಂದೆಡೆ ಇಷ್ಟೊಂದು ಕೆಟ್ಟ ರೀತಿಯಾಗಿ ವರ್ತಿಸುವ ಶಿಕ್ಷಕನ ವಿರುದ್ಧ ಕ್ರಮಕೈಗೊಳ್ಳದ ಸರ್ಕಾರ, ಶಿಕ್ಷಣ ಇಲಾಖೆ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ