ಪೊಲೀಸ್ ವೇಷದಲ್ಲಿ ಬಂದ ಕಳ್ಳರಿಂದ‌‌ ಚಿನ್ನಾಭರಣ ಕಳ್ಳತನ - Mahanayaka

ಪೊಲೀಸ್ ವೇಷದಲ್ಲಿ ಬಂದ ಕಳ್ಳರಿಂದ‌‌ ಚಿನ್ನಾಭರಣ ಕಳ್ಳತನ

police
03/07/2023


Provided by

ಬೆಂಗಳೂರು:  ಪೊಲೀಸ್ ಸೋಗಿನಲ್ಲಿ ಬಂದ ಕಳ್ಳರುಚಿನ್ನಾಭರಣ ದೋಚಿರುವ ಘಟನೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇನಲ್ಲಿ  ನಡೆದಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಅರಪಟ್ಟು ನಿವಾಸಿ ಕೆ.ಕೆ.ಮುತ್ತಪ್ಪ ಅವರ 3.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಆರೋಪಿಗಳು ದೋಚಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆ.ಕೆ ಮುತ್ತಪ್ಪ  ಜೂನ್ 29 ರಂದು ಬೆಂಗಳೂರಿನಲ್ಲಿ ವೈದ್ಯರನ್ನು ಸಂಪರ್ಕಿಸಿ ಜೂ. 30 ತಡರಾತ್ರಿ ಬೆಂಗಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇ ರೈಲಿನಲ್ಲಿ ವಿರಾಜಪೇಟೆಗೆ ಹಿಂದಿರುಗುತ್ತಿದ್ದರು.

ಪ್ರಯಾಣದ ವೇಳೆ ನಿದ್ದೆ ಬಂದ ಹಿನ್ನೆಲೆ ಮದ್ದೂರಿನ ಐಶ್ವರ್ಯ ಇಂಟರ್‌ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ ನ ನಿರ್ಗಮನದಲ್ಲಿ ಕಾರು ನಿಲ್ಲಿಸಿ, ಕಾರಿನಲ್ಲಿಯೇ ನಿದ್ರೆಗೆ ಜಾರಿದ್ದರು.

ಸ್ವಲ್ಪ ಸಮಯದ ನಂತರ ಓರ್ವ ಕಿಟಕಿ ಬಡಿದು ಎಬ್ಬಿಸಿ, ತಾನು ಪೊಲೀಸ್ ಅಧಿಕಾರಿ ಎಂದು ಹೇಳಿದನು. ನಂತರ ಕುಡಿದು ವಾಹನ ಚಲಾಯಿಸಿದ್ದೀರಿ ಪರಿಶೀಲಿಸಬೇಕು ಕೆಳಗೆ ಇಳಿ ಎಂದಾಗ ಮುತ್ತಪ್ಪ ಅವರು ಬಾಗಿಲು ತೆರೆದು ಇಳಿಯುತ್ತಿದ್ದಾಗ  ದುಷ್ಕರ್ಮಿ ಚಾಕು ತೋರಿಸಿ ಬೆದರಿಕೆ ಹಾಕಿದ.

ಈ ವೇಳೆ ಮುತ್ತಪ್ಪ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಮತ್ತೊಂದು ಬದಿಯಲ್ಲಿ ನಿಂತಿದ್ದ ದುಷ್ಕರ್ಮಿ ಚಾಕು ತೋರಿಸಿದನು. ನಂತರ ಮುತ್ತಪ್ಪ ಅವರನ್ನು ಕಾರಿನಿಂದ ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ಚಿನ್ನದ ಸರವನ್ನು ಕಸಿದುಕೊಂಡರು.

ನಂತರ ಮುತ್ತಪ್ಪ ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು. ಕೂಡಲೆ ಮುತ್ತಪ್ಪ 112 ಎಮರ್ಜೆನ್ಸಿ ಸಂಖ್ಯೆಗೆ ಕರೆ ಮಾಡಿದ್ದರಿಂದ‌ ಕೂಡಲೆ ಹೆದ್ದಾರಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ಥಳ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಘಟನೆ‌ ಕುರಿತು ಮಂಡ್ಯ ಎಸ್ಪಿ ಯತೀಶ್ ಮಾತನಾಡಿ, ನಾಲ್ಕು ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ನಿಯಮಿತವಾಗಿ ಬೀಟ್‌ನಲ್ಲಿ ಹೋಗಲು ಪೊಲೀಸರಿಗೆ ಸೂಚಿಸಲಾಗಿದೆ. ನಿರ್ಜನ ಸ್ಥಳಗಳಲ್ಲಿ ನಿಲ್ಲದಿರುವಂತೆ ಪ್ರಯಾಣಿಕರಿಗೆ ಸೂಚಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ