ಕೊನೆಗೂ ವೈರಲ್ ಪೋಸ್ಟ್ ನ ಅಸಲಿಯತ್ತು ಬಯಲು: ಮಾಲ್ಡೀವ್ಸ್-ಭಾರತದ ಆ ಒಂದು ಚಿತ್ರದ ಹಿಂದಿನ ಸೀಕ್ರೇಟ್ಸ್ ಔಟ್..!

ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ವೈರಲ್ ಆಗುತ್ತಿದೆ. ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಒದಗಿಸಿದೆ ಎಂಬುದೇ ಈ ಸುದ್ದಿ. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಈ ಸುದ್ದಿಗೆ ಭಾರೀ ಮಹತ್ವವನ್ನು ಕೊಟ್ಟು ಹಂಚಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯ ಮಾಸ್ಟರ್ ಸ್ಟ್ರೋಕ್ ಇದು ಎಂಬಂತೆ ವಿವಿಧ ಒಕ್ಕಣೆಗಳೊಂದಿಗೆ ಇದನ್ನು ಹಂಚಲಾಗುತ್ತಿದೆ. ಆದರೆ ನಿಜ ಏನು ಎಂಬುದು ಈಗ ಬಹಿರಂಗಗೊಂಡಿದೆ.
ಚೀನಾಕ್ಕೆ ಭಾರತದಿಂದ ಭಾರಿ ದೊಡ್ಡ ಶಾಕ್. ಮಾಲ್ಡೀವ್ಸ್ ಅನ್ನು ಮಿಲಿಟರಿ ಬೇಸ್ ಮಾಡಿಕೊಂಡು ಭಾರತ ಚೀನಾಕ್ಕೆ ಹೊಡೆಯಲು ಸಜ್ಜಾಗಿದೆ. ಬಾಂಗ್ಲಾದೇಶವನ್ನು ತೋರಿಸಿ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರನ್ನು ಭಾರತ ಬೆದರಿಸಿ ಈ 28 ದ್ವೀಪವನ್ನು ವಶಪಡಿಸಿಕೊಂಡಿದೆ ಎಂಬೆಲ್ಲಾ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಹಂಚಿಕೊಂಡಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು.
ಮಾಲ್ಡೀವ್ಸ್ ನ 28 ದ್ವೀಪಗಳ ನೀರು ವಿತರಣೆ, ತ್ಯಾಜ್ಯ ನೀರಿನ ಶುದ್ದೀಕರಣ ಇತ್ಯಾದಿಗಳಿಗೆ ಭಾರತ ನೀಡುತ್ತಿರುವ ಸಹಾಯ ಯೋಜನೆಯಾದ ಲೈನ್ ಆಫ್ ಕ್ರೆಡಿಟ್ ನ ಅಧ್ಯಕ್ಷರಾಗಿರುವ ಅಧ್ಯಕ್ಷ ಮುಯಿಝು ಅವರ ಉಪಸ್ಥಿತಿಯಲ್ಲಿ ವಿದೇಶಾಂಗ ಸಚಿವ ಜಯಶಂಕರ್ ಜಂಟಿಯಾಗಿ ಈ ಯೋಜನೆಯನ್ನು ಉದ್ಘಾಟಿಸಿದ್ದರು. ಈ ಮೂಲಕ ಈ 28 ದ್ವೀಪಗಳ ಹಲವು ಚಟುವಟಿಕೆಗಳಿಗೆ ಭಾರತ ನೆರವು ನೀಡಲಿದೆ. ಈ ಉದ್ಘಾಟನೆಯ ಚಿತ್ರವನ್ನೇ ಬಳಸಿಕೊಂಡು ಈ ಸುಳ್ಳು ಸುದ್ದಿಯನ್ನು ಹಂಚುವುದಕ್ಕೆ ಅನೇಕರು ಯತ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth