ತೀರ್ಥ ಯಾತ್ರೆಯ ನೆಪದಲ್ಲಿ ಗಾಂಜಾ ಸಾಗಾಟ: ದಂಪತಿ ಸೇರಿದಂತೆ ನಾಲ್ವರು ಅರೆಸ್ಟ್ - Mahanayaka

ತೀರ್ಥ ಯಾತ್ರೆಯ ನೆಪದಲ್ಲಿ ಗಾಂಜಾ ಸಾಗಾಟ: ದಂಪತಿ ಸೇರಿದಂತೆ ನಾಲ್ವರು ಅರೆಸ್ಟ್

janja
28/03/2022


Provided by

ಚವರ: ವಿಶಾಖಪಟ್ಟಣದಿಂದ ಕೊಲ್ಲಂಗೆ ಕಾರಿನಲ್ಲಿ ಸಾಗಿಸುತ್ತಿದ್ದ 24 ಕೆಜಿ ಗಾಂಜಾವನ್ನು  ಕೇರಳ ಪೊಲೀಸರು ವಶಪಡಿಸಿಕೊಂಡಿದ್ದು ದಂಪತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ನಿನ್ನೆ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ನೀಂದಕರ ಚಿಲಂತಿ ಜಂಕ್ಷನ್ ಬಳಿ ಕೊಲ್ಲಂ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ವಿಶೇಷ ಕಾರ್ಯ ಪಡೆ ಚವರ ಪೊಲೀಸ್ ಮತ್ತು ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದೆ.

ಆಟ್ಟಿಂಗಲ್ ನಿವಾಸಿ ವಿಷ್ಣು (27), ಅವರ ಪತ್ನಿ ಸೂರ್ಯ (25), ಅಭಯ್ ಸಾಬು (21) ಉಣ್ಣಿಕೃಷ್ಣನ್ (27) ಬಂಧಿತ ಆರೊಪಿಗಳು.  ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುವ ರೀತಿಯಲ್ಲಿ ತೆರಳುತ್ತಿದ್ದ ದಂಪತಿಯ ಕಾರನ್ನು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

ಕಾರಿನ ಎಲ್ಲಾ ಡೋರ್ ಪ್ಯಾನೆಲ್ ಗಳನ್ನು ತೆರೆದಾಗ ಗಾಂಜಾ  ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.  ಸೂರ್ಯ ಅವರ ಎರಡು ವರ್ಷದ ಮಗು ಕೂಡ ಅವರೊಂದಿಗೆ ಇತ್ತು.  ಬಂಧಿತ ಯುವಕರ ಮೇಲೆ ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ.

ಮಹಿಳೆಯರು ಮತ್ತು ಮಕ್ಕಳ ಬಳಸಿಕೊಂಡು ಬೇರೆ ರಾಜ್ಯಗಳಿಂದ ಗಾಂಜಾ ಸಾಗಾಟ ಮಾಡುವ ಗ್ಯಾಂಗ್ ಸಕ್ರಿಯವಾಗಿದೆ.  ನಿನ್ನೆ ನೀಂದಕರದಲ್ಲಿ ಬಂಧಿತರಾದವರು ಈ ರೀತಿ ಹಲವು ಬಾರಿ ಗಾಂಜಾ ಸಾಗಾಟ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.  ತೀರ್ಥಯಾತ್ರೆ ಮತ್ತು  ವಿನೋದ ಯಾತ್ರಾ ನೆಪದಲ್ಲಿ ಈ ಗುಂಪು ಇಷ್ಟು ದಿನ ತಿರುಗಾಡುತ್ತಿತ್ತು.  ಉನ್ನಿಕೃಷ್ಣನ್ ಮತ್ತು ಅವರ ಪತ್ನಿ ಈ ಹಿಂದೆ ರೈಲಿನಲ್ಲಿ ಕೂಡ  ಗಾಂಜಾ ಸಾಗಾಟ ಮಾಡುತ್ತಿದ್ದರು ಎಂಬ ಮಾಹಿತಿ ಈಗಾಗಲೇ ಲಭ್ಯವಾಗಿದೆ .

ಈ ಬಾರಿ ವಿಷ್ಣು ಮತ್ತು ಅವರ ಪತ್ನಿ ಗಾಂಜಾ ಸಾಗಾಟದ  ನೇತೃತ್ವ ವಹಿಸಿದ್ದರು.  ಗಾಂಜಾ ಸಾಗಾಟಕ್ಕೆ ಬಾಡಿಗೆ ವಾಹನಗಳನ್ನು ಬಳಸಲಾಗಿದ್ದು ಶಾಲಾ-ಕಾಲೇಜುಗಳನ್ನು ಕೇಂದ್ರೀಕರಿಸಿ ಜಿಲ್ಲೆಯ ವಿವಿಧ ಗುಂಪುಗಳಿಗೆ ಗಾಂಜಾ ವಿತರಿಸುತ್ತಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ