ಪಾಕಿಸ್ತಾನ ಜಿಂದಾಬಾದ್ ಎಂದವನ ಹೊಡೆದ್ರು.. ಅದಕ್ಕೆ ಪ್ರತಿಕಾರ: ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬಗ್ಗೆ ಸಿ.ಟಿ.ರವಿ ಹೇಳಿಕೆ

ಚಿಕ್ಕಮಗಳೂರು: ಕ್ರಿಕೆಟ್ ಗ್ರೌಂಡ್ ಗೆ ಬಂದು ಪಾಕಿಸ್ತಾನ ಜಿಂದಾಬಾದ್ ಎಂದವನ ಹೊಡೆದ್ರು, ಅದಕ್ಕೆ ಪ್ರತಿಕಾರವಾಗಿ ಭಾರತ್ ಮಾತಾ ಕೀ ಜೈ ಅನ್ನೋನ ಕೊಲೆ ಮಾಡಲಾಗಿದೆ ಎಂದು ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಹೊರ ಶತ್ರುಗಳನ್ನ ಸೇನೆ ಬಲವಾಗಿದೆ ನೋಡಿಕೊಳ್ಳುತ್ತೆ, ಒಳಗಿನ ಶತ್ರುಗಳನ್ನ ರಾಜಕಾರಣ ದೂರವಿಟ್ಟು ಬೇರು ಸಹಿತ ಕಿತ್ತಾಕಬೇಕು. ಇವರೆಲ್ಲಾ ಮತಾಂದತೆಯ ಹುಚ್ಚು ಹಿಡಿಸಿಕೊಂಡಿರುವ ದೇಶದ್ರೋಹಿಗಳು. ಇವರನ್ನ ಸಹಿಸೋದು ಕ್ಷಮಿಸೋದು, ಎರಡನ್ನೂ ಮಾಡ್ಬಾರ್ದು ಅಂತ ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಡಿ.ಪಿ.ಐ. ಇಂತಹಾ ಮತಾದಂತೆಯ ಹುಚ್ಚು ಹಿಡಿದ ದ್ರೋಹಿಗಳ ಸಂಘಟಿಸೋ ಕೆಲಸ ನಿರಂತರವಾಗಿ ಮಾಡ್ತಿವೆ, ವಿಧಾನಸೌಧದ ಕಾರಿಡಾರ್ ಗೆ ಬಂದು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ. ಈ ದೇಶದ್ರೋಹಿಗಳನ್ನು ನಾವು ಮತ ಬ್ಯಾಂಕ್ ಎಂದು ನೋಡಬೇಕಾ? ಇವರನ್ನ ನಿಯಂತ್ರಿಸದಿದ್ದರೆ, ಬೇರು ಸಹಿತ ಕಿತ್ತಾಕದಿದ್ರೆ ಭಾರತಕ್ಕೆ ಉಳಿಗಾಲವಿಲ್ಲ ಎಂದು ಅವರು ಹೇಳಿದರು.
ದೇಶದ್ರೋಹಿಗಳು ದೇಶದೊಳಗೆ ನಡೆಸುತ್ತಿರುವ ಷಡ್ಯಂತ್ರ, ರಾಷ್ಟ್ರ ಭಕ್ತರನ್ನ ಈ ರೀತಿ ಕೊಲ್ಲುತ್ತಿದ್ದಾರೆ. ಮುಖ್ಯಮಂತ್ರಿಗಳೇ… ನೀವು ಎಸ್.ಡಿ.ಪಿ.ಐ. ಹಾಗೂ ಪಿ.ಎಫ್.ಐ. ಮೇಲಿನ ಕೇಸ್ ವಿಥ್ ಡ್ರಾ ಮಾಡಿದ್ರಿ, ಆ ಮೂಲಕ ಅವರಿಗೆ ಕ್ರೈಂ ನಡೆಸೋಕೆ ಮತ್ತಷ್ಟು ಬಲ ಕೊಡ್ತಿದ್ದೀರಾ ಎಂದು ಪ್ರಶ್ನಿಸಿದರು.
ಅವರ ಮೇಲಿದ್ದ ಕೇಸ್ ಗಳನ್ನು ವಾಪಸ್ ಪಡೆದದ್ದನ್ನ ಹಿಂತೆಗೆದುಕೊಳ್ಳಿ, ಇಲ್ಲವಾದರೆ ಈ ರೀತಿಯ ಹತ್ಯೆಗೆ ನೀವೇ ಪರೋಕ್ಷ ಕಾರಣರಾಗ್ತೀರಾ? ಅವರ ಅಜೆಂಡಾ ಗೊತ್ತಿಲ್ಲದ್ದಲ್ಲ, ಗುರುತಿಸಿ, ಗಮನಿಸಬೇಕಿದೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: