ಗೋಡಂಬಿ ವ್ಯಾಪಾರಿಯ ಮನೆಗೆ ನುಗ್ಗಿದ ಕಳ್ಳರು: ನಗದು, ಚಿನ್ನಾಭರಣ, 2.5 ಕೆ.ಜಿ. ಬೆಳ್ಳಿ ಕಳವು - Mahanayaka

ಗೋಡಂಬಿ ವ್ಯಾಪಾರಿಯ ಮನೆಗೆ ನುಗ್ಗಿದ ಕಳ್ಳರು: ನಗದು, ಚಿನ್ನಾಭರಣ, 2.5 ಕೆ.ಜಿ. ಬೆಳ್ಳಿ ಕಳವು

chikkaballapur
27/01/2024


Provided by

ಚಿಕ್ಕಬಳ್ಳಾಪುರ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಅಗ್ರಹಾರ ಬಡಾವಣೆಯಲ್ಲಿ ನಡೆದಿದೆ.

ಗೋಡಂಬಿ ವ್ಯಾಪಾರಿ ಪ್ರಭಲಾಂಬ ಎಂಬವರು ತಮ್ಮ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಕುಟುಂಬ ಸಮೇತವಾಗಿ ತೆರಳಿದ್ದರು. ರಾತ್ರಿ ವೇಳೆ ಮನೆಗೆ ನುಗ್ಗಿದ ಕಳ್ಳರು ಕಳ್ಳತನ ನಡೆದಿದ್ದಾರೆ.

ಮನೆಯ ಬೀಗ ಮುರಿದು, ಒಳನುಗ್ಗಿದ ಕಳ್ಳರು ಬೀರ್‌ ನಲ್ಲಿದ್ದ ಒಂದೂವರೆ ಲಕ್ಷ ರೂ. ನಗದು, 300 ಗ್ರಾಂ ಚಿನ್ನಾಭರಣ ಹಾಗೂ 2.5 ಕೆ.ಜಿ.ಬೆಳ್ಳಿಯ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಮನೆಯವರು ಮರುದಿನ ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.  ಘಟನಾ ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ