ಮದುವೆಗೆ ಹೋದ ಮನೆಯವರು: ಬೀಗ ಮುರಿದು ಕಳವು ಮಾಡಿದ ಕಳ್ಳರು! - Mahanayaka

ಮದುವೆಗೆ ಹೋದ ಮನೆಯವರು: ಬೀಗ ಮುರಿದು ಕಳವು ಮಾಡಿದ ಕಳ್ಳರು!

pavagada
03/07/2024


Provided by

ತುಮಕೂರು: ಮನೆಯ ಬೀಗ ಮುರಿದು ನಗದು, ಚಿನ್ನ ದೋಚಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ ಕುವೆಂಪು ನಗರ ನಿವಾಸಿ ನಿವೃತ್ತ ಶಿಕ್ಷಕ ಹುಲಿರಾಜು ಮನೆಯಲ್ಲಿ ಕಳ್ಳತನ ನಡೆದಿದೆ. ಸುಮಾರು ಒಂದು ಕೆ.ಜಿ. ಬೆಳ್ಳಿ ಹಾಗೂ 30 ಸಾವಿರ ನಗದು ಕಳ್ಳತನವಾಗಿದೆ.

ಮನೆಯ ಸದಸ್ಯರೆಲ್ಲ ಮದುವೆ ಕಾರ್ಯಕ್ರಮದ ನಿಮಿತ್ತ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದ ಸನ್ನಿವೇಶವನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಮನೆಯ ಬೀಗ ಮುರಿದು ಕಳ್ಳತನ ಎಸಗಿದ್ದಾರೆ.

ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ