UPI—ಆನ್ ಲೈನ್ ಬ್ಯಾಂಕ್ ಬಳಕೆ ಮಾಡುತ್ತಿದ್ದೀರಾ? ಹಾಗಿದ್ರೆ ಈ ವಿಚಾರ ತಪ್ಪದೇ ತಿಳಿದುಕೊಳ್ಳಿ

ಸೈಬರ್ ವಂಚನೆ ಒಂದು ಸವಾಲಿನ ವಿಚಾರವಾಗಿ ಪರಿಣಮಿಸಿದೆ. ಸದ್ಯ ಆನ್ ಲೈನ್ ಮೂಲಕ ವ್ಯವಹಾರಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ತಂತ್ರಜ್ಞಾನ ಮತ್ತು ಕಾನೂನು ವ್ಯವಸ್ಥೆಗೆ ಸೈಬರ್ ವಂಚನೆ ಪ್ರಕರಣಗಳು ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ಸ್ವತಃ ನೀವೇ ಜಾಗೃತರಾಗಲು ಏನೇನು ಮಾಡಬಹುದು ಎನ್ನುವುದನ್ನು ತಿಳಿಯೋಣ.
Public wi-fi ಗಳ ಬಗ್ಗೆ ಎಚ್ಚರ:
ಸಾಕಷ್ಟು ಜನರು ಫ್ರೀ ವೈಫೈಗಾಗಿ ಕಾಯುತ್ತಿರುತ್ತೀರಿ. ಎಲ್ಲಾದರೂ ಫ್ರೀ ವೈಫೈ ದೊರೆತರೆ ಅದನ್ನು ಪ್ರವೇಶಿಸಿ ನೀವು ಬಳಕೆ ಮಾಡುತ್ತಿರಬಹುದು. ಆದರೆ ಪಬ್ಲಿಕ್ ವೈಫೈ(Public wi-fi)ಗಳ ಬಳಕೆ ಮಾಡುವ ವೇಳೆ ನೀವು ಜಾಗರೋಕರಾಗಿರಬೇಕು. ಯಾವುದೇ ಕಾರಣಕ್ಕೂ ಪಬ್ಲಿಕ್ ವೈಫೈ ಬಳಸಿ ನಿಮ್ಮ ವೈಯಕ್ತಿಕ ಅಥವಾ ಹಣಕಾಸಿನ ಡೇಟಾವನ್ನು ಪ್ರವೇಶಿಸಬೇಡಿ. ಇದರಿಂದ ನಿಮ್ಮ ವೈಯಕ್ತಿಕ ಅಥವಾ ಹಣಕಾಸಿನ ಡೇಟಾ ಸೈಬರ್ ವಂಚಕರಿಗೆ ಸಿಗುವ ಸಾಧ್ಯತೆ ಇದೆ. ಈ ಡೇಟಾವನ್ನು ಬಳಸಿಕೊಂಡು ಸೈಬರ್ ವಂಚಕರು ನಿಮ್ಮನ್ನು ವಂಚಿಸಬಹುದು.
APK File—Appಗಳು:
APK ಫೈಲ್ ಮತ್ತು ಅನುಮಾನಾಸ್ಪದ APPಗಳನ್ನು Install ಮಾಡಲು ಹೋಗಬೇಡಿ. ಇದರಿಂದ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು. ಮಾತ್ರವಲ್ಲದೇ ನಿಮ್ಮ ಆನ್ ಲೈನ್ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಸೈಬರ್ ಕಳ್ಳರು ಕದಿಯಬಹುದು. ಇಂತಹ ಹಲವಾರು ಘಟನೆಗಳು ಈಗಾಗಲೇ ವರದಿಯಾಗಿವೆ.
Link ತೆರೆಯುವ ಮುನ್ನ ಎಚ್ಚರ:
ವಾಟ್ಸಾಪ್ ಸೇರಿದಂತೆ ಇತರ ಸಾಮಾಜಿಕ ವೇದಿಕೆಗಳಲ್ಲಿ ಬರುವ ಲಿಂಕ್ ಗಳನ್ನು ತೆರೆಯುವ ಮುನ್ನ ಎಚ್ಚರವಾಗಿರಬೇಕು. ಅಪರಿಚಿತ ಲಿಂಕ್ ಗಳನ್ನು ತೆರೆಯದಿರುವುದು ಉತ್ತಮ. ಲಿಂಕ್ ಗಳನ್ನು ತೆರೆಯುವುದರಿಂದ ನೀವು ಸೈಬರ್ ವಂಚಕರ ಮೋಸದ ಬಲೆಗೆ ಬೀಳಬಹುದು.
Strog Password ಬಳಸಿ:
ಆನ್ ಲೈನ್(UPI Online Payment) ನಲ್ಲಿ ವ್ಯವಹರಿಸುವವರು ನಿಮ್ಮ ಮೊಬೈಲ್ ಮತ್ತು ಬ್ಯಾಂಕಿಂಗ್ ವ್ಯವಹಾರದ APPಗಳಿಗೆ ಸ್ಟ್ರಾಂಗ್ ಪಾಸ್ ವರ್ಡ್ ಗಳನ್ನು ಬಳಸಿ. ಸಾಕಷ್ಟು ಜನರು ತಮಗೆ ನೆನಪಿಟ್ಟುಕೊಳ್ಳಲು ಸಹಾಯವಾಗಲಿ ಎಂದು ತಮ್ಮ ಮೊಬೈಲ್ ಸಂಖ್ಯೆಗಳನ್ನೇ ಕೊಟ್ಟಿರುತ್ತಾರೆ. ಇನ್ನು ಕೆಲವರು 1234 ಹೀಗೆ ಸಂಖ್ಯೆಗಳನ್ನು ಕೊಟ್ಟಿರುತ್ತೀರಿ, ಇನ್ನು ಕೆಲವರು ತಮ್ಮ ಹುಟ್ಟಿದ ಇಸವಿ, ಹುಟ್ಟಿದ ದಿನಾಂಕಗಳನ್ನು ನೀಡುತ್ತೀರಿ. ಆದರೆ ಇಂತಹ ಪಾಸ್ ವರ್ಡ್ ನಿಂದ ನೀವು ಸುಲಭವಾಗಿ ಸೈಬರ್ ಕಳ್ಳರ ವಂಚನೆಗೆ ಬಲಿಯಾಗುತ್ತೀರಿ. ಹಾಗಾಗಿ ತುಂಬಾ ಕಠಿಣವಾದ ಪಾಸ್ ವರ್ಡ್ ನಿಮ್ಮ ಮೊಬೈಲ್ ಗೆ ಮತ್ತು ಆನ್ ಲೈನ್ ಬ್ಯಾಂಕಿಂಗ್, ಯುಪಿಐಗಳಿಗೆ ಬಳಸುವುದು ನಿಮ್ಮ ಸುರಕ್ಷತೆಗೆ ಉತ್ತಮ.
OTP, Password ಹಂಚಿಕೊಳ್ಳಬೇಡಿ:
ಸಾಕಷ್ಟು ಜನರು OTP, Password ಗಳನ್ನು ತಮ್ಮ ಸಾಮಾಜಿಕ ತಾಣಗಳ ಮೆಸೆಂಜರ್, ವಾಟ್ಸಾಪ್ ಗಳಲ್ಲಿ ಹಂಚಿಕೊಳ್ಳುತ್ತೀರಿ. ಆದರೆ ಇದು ಸುರಕ್ಷಿತವಲ್ಲ. ಆನ್ ಲೈನ್ ಮೋಸದ ಜಾಲಗಳು ನಿಮಗೆ ಬ್ಯಾಂಕ್ ಮೂಲಕ ಕರೆ ಮಾಡಿದ್ದೇವೆ ಎಂದು ನಿಮ್ಮನ್ನು ನಂಬಿಸಬಹುದು. ನಿಮ್ಮ ಮೊಬೈಲ್ ಗೆ ಬಂದ OTP ಕಳಿಸಿ ಎಂದು ಕೇಳಬಹುದು. ಆದರೆ ನೀವು OTP ಯಾರೊಂದಿಗೂ ಶೇರ್ ಮಾಡಿಕೊಳ್ಳಬೇಡಿ, ನೀವು OTP ಶೇರ್ ಮಾಡಿದರೆ, ನಿಮ್ಮ ಖಾತೆಯಲ್ಲಿರುವ ಹಣ ಸೈಬರ್ ಕಳ್ಳರ ಪಾಲಾಗಬಹುದು.
ಸೈಬರ್ ಕಳ್ಳರು ನಾನಾ ವೇಷಗಳಲ್ಲಿ ನಿಮಗೆ ಕರೆ ಮಾಡುತ್ತಾರೆ. ನಿಮ್ಮ ಸಂಬಂಧಿಕರಂತೆ ಮಾತನಾಡಿ ನಿಮ್ಮನ್ನು ನಂಬಿಸಬಹುದು. ವ್ಯಾಪಾರಿಗಳ ಬಳಿ ಗ್ರಾಹಕರಂತೆ ನಟಿಸಿ ವಂಚಿಸಬಹುದು ಹೀಗಾಗಿ ಸೈಬರ್ ವಂಚಕರಿಂದ ತಪ್ಪಿಸಿಕೊಳ್ಳಲು ಸ್ವತಃ ನೀವೇ ಜಾಗೃತರಾಗಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: