“ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ, ವಾಸಕ್ಕೆ ಯೋಗ್ಯವಲ್ಲ” ಎಂದು ಬ್ಯಾನರ್ ಕಟ್ಟಿ ಕೈತೊಳೆದುಕೊಂಡ ಅಧಿಕಾರಿಗಳು

- ಪೌರ ಕಾರ್ಮಿಕರ ಜೀವಕ್ಕೂ, ಜೀವನಕ್ಕೂ ಸುರಕ್ಷತೆ ಇಲ್ಲ
ಮಂಗಳೂರು ನಗರದ ಮಹಾಕಾಳಿಪಡ್ಪುವಿನ ಪೌರ ಕಾರ್ಮಿಕರ ವಸತಿ ನಿಲಯದ ಹಳೆ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅಲ್ಲಿರುವ 24 ಕುಟುಂಬಗಳನ್ನು ಸ್ಥಳಾಂತರಿಸಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ನಡುವೆ, ಅಧಿಕಾರಿಗಳು ಬ್ಯಾನರ್ ಅಳವಡಿಸಿ, ಸೂಕ್ತ ಪರ್ಯಾಯ ವ್ಯವಸ್ಥೆ ಮಾಡದೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಮಹಾಕಾಳಿಪಡ್ಪುವಿನ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿ ವಾಸವಿರುವ 24 ಕುಟುಂಬಗಳಲ್ಲಿ 10 ನಿವೃತ್ತ ನೌಕರರ ಕುಟುಂಬಗಳಿವೆ. ಈ ಹಿಂದೆ ಕಟ್ಟಡದಲ್ಲಿ ಬಹಳಷ್ಟು ಕುಟುಂಬಗಳು ವಾಸವಾಗಿದ್ದರು. ಕೆಲ ಪೌರ ಕಾರ್ಮಿಕ ಕುಟುಂಬಗಳನ್ನು ಹೊಸತಾಗಿ ನಿರ್ಮಿಸಲಾದ ಕ್ವಾರ್ಟರ್ಸ್ ಗೆ ಸ್ಥಳಾಂತರ ಮಾಡಿದ್ರೆ ನಿವೃತ್ತರಾದ ಕೆಲವು ಕುಟುಂಬಗಳ ಸಹಿತ ಕೆಲ ಪೌರ ಕಾರ್ಮಿಕರ ಕುಟುಂಬ ಹಳೆ ಕಟ್ಟಡದಲ್ಲಿಯೇ ವಾಸವಿದ್ದಾರೆ.
ಪಾಲಿಕೆಯು ಕಟ್ಟಡದಲ್ಲಿ ಬ್ಯಾನರ್ ಅಳವಡಿಸಿದೆ. ಬ್ಯಾನರ್ ನಲ್ಲಿ, ‘ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಯಾರು ಕೂಡಾ ಈ ಕಟ್ಟಡದ ಒಳಗೆ ಅಥವಾ ಸುತ್ತ ಓಡಾಡದಂತೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ’ ಎಂದು ಬರೆಯಲಾಗಿದೆ.
ಅಧಿಕಾರಿಗಳ ಕೆಲಸ ಕೇವಲ ಬ್ಯಾನರ್ ಕಟ್ಟಿ ಹೋಗುವುದೇ? ಇಲ್ಲಿ ವಾಸಿಸ ಬಾರದು ಎಂದು ಹೇಳಿದರೆ ಮುಗಿಯಿತೇ? ಇಲ್ಲಿ ವಾಸಿಸುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಬೇಡವೇ? ಎನ್ನುವ ಇಲ್ಲಿನ ನಿವಾಸಿಗಳ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ.
ಸರ್ಕಾರ ತಕ್ಷಣವೇ ಈ ಬಗ್ಗೆ ಗಮನ ಹರಿಸಬೇಕು. ಅಧಿಕಾರಿಗಳು ಕೇವಲ ಬ್ಯಾನರ್ ಕಟ್ಟಲು ಸೀಮಿತರಾಗದೇ, ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿದೆ ಎನ್ನುವ ಒತ್ತಾಯ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw