ಆಹಾರ ವ್ಯರ್ಥ ಮಾಡಿದ್ರೆ ಈ ಹೊಟೇಲ್ ನಲ್ಲಿ ದಂಡ ಹಾಕ್ತಾರೆ!

ನಮ್ಮ ಹಣ, ನಮ್ಮ ಊಟ ಬೇಕಾಗುವಷ್ಟು ಊಟ ಮಾಡ್ತೀವಿ, ಸಾಕಾಯ್ತು ಅಂದ್ರೆ ಅಲ್ಲೇ ಬಿಟ್ಟು ಹೋಗ್ತಿವಿ ಅಂತ ಹೇಳುವವರಿಗೇನೂ ಕಡಿಮೆಯಿಲ್ಲ. ಬೇಕಾಗುವಷ್ಟೇ ಆರ್ಡರ್ ಮಾಡಿ ಹೊಟೇಲ್ ಗಳಲ್ಲಿ ಊಟ ಮಾಡುವವರಿಗಿಂತ, ಸಿಕ್ಕಿದ್ದೆಲ್ಲ ಆರ್ಡರ್ ಮಾಡಿ, ಕೊನೆಗೆ ಯಾವುದನ್ನೂ ಪೂರ್ತಿಯಾಗಿ ತಿನ್ನದೇ ಎದ್ದು ಹೋಗುವ ಗ್ರಾಹಕರನ್ನು ದಿನ ನಿತ್ಯ ಕಾಣಬಹುದು. ಇನ್ನು ಕೆಲವು ಕಡೆಗಳಲ್ಲಿ ಬೇಡ ಎಂದರೂ ದುಪ್ಪಟ್ಟು ಆಹಾರಗಳನ್ನು ಸೇರಿಸಿ ಹೆಚ್ಚು ಬಿಲ್ ಹಾಕುವ ಹೊಟೇಲ್ ಗಳನ್ನೂ ನೀವು ನೋಡಿರಬಹುದು. ಆದ್ರೆ ಇಲ್ಲೊಂದು ಹೊಟೇಲ್ ನಲ್ಲಿ ಆಹಾರ ವ್ಯರ್ಥ ಮಾಡುವವರಿಗೆ ದಂಡ ವಿಧಿಸಲಾಗುತ್ತಿದೆ.
ಪುಣೆಯ ದಕ್ಷಿಣ ಭಾರತದ ರೆಸ್ಟೋರೆಂಟ್ ವೊಂದು ಆಹಾರವನ್ನು ವ್ಯರ್ಥ ಮಾಡುವ ಗ್ರಾಹಕರಿಗೆ ಹೆಚ್ಚುವರಿ 20 ರೂ. ಶುಲ್ಕವನ್ನು ವಿಧಿಸುವ ಮೂಲಕ ಹೊಸ ಸಂಪ್ರದಾಯವನ್ನು ಪರಿಚಯಿಸಿದೆ. X ಬಳಕೆದಾರರು (@rons1212)ವೊಬ್ಬರು ಈ ರೆಸ್ಟೋರೆಂಟ್ ನ ಕೈಬರಹದ ಮೆನುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಮೆನುವಿನಲ್ಲಿ “ಆಹಾರ ವ್ಯರ್ಥ ಮಾಡುವುದಕ್ಕೆ” ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದು ಎನ್ನುವ ಸೂಚನೆಯನ್ನು ಕಾಣಬಹುದು.
ನೀವು ಆಹಾರವನ್ನು ವ್ಯರ್ಥ ಮಾಡಿದರೆ ಪುಣೆಯ ಹೋಟೆಲ್ 20 ರೂ. ಹೆಚ್ಚುವರಿಯಾಗಿ ವಿಧಿಸುತ್ತಿದೆ. ಪ್ರತಿ ರೆಸ್ಟೋರೆಂಟ್ ಕೂಡ ಅದೇ ರೀತಿ ಮಾಡಬೇಕು, ಮದುವೆಗಳು ಮತ್ತು ಸಮಾರಂಭಗಳು ಸಹ ದಂಡ ವಿಧಿಸಲು ಪ್ರಾರಂಭಿಸಬೇಕು ಎಂದು ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ.
ಆಹಾರ ವ್ಯರ್ಥವನ್ನು ತಡೆಗಟ್ಟುವ ಕ್ರಮವನ್ನು ಹಲವರು ನೆಟ್ಟಗರು ಸ್ವಾಗತಿಸಿದರು, ಆದರೆ ಕೆಲವರು ಗ್ರಾಹಕರು ತಮಗೆ ಇಷ್ಟವಿಲ್ಲದ ಊಟವನ್ನು ಮುಗಿಸಲು ಒತ್ತಾಯಿಸುವುದು ಅನ್ಯಾಯವಾಗಬಹುದು ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD