ದಸರಾ ವೇಳೆ ಈ ಗ್ರಾಮದಲ್ಲಿ ರಾವಣನೇ ದೇವರು: ಇಲ್ಲಿ ನಡೆಯುತ್ತೆ ವಿಶೇಷ ಪೂಜೆ - Mahanayaka
6:28 PM Wednesday 15 - October 2025

ದಸರಾ ವೇಳೆ ಈ ಗ್ರಾಮದಲ್ಲಿ ರಾವಣನೇ ದೇವರು: ಇಲ್ಲಿ ನಡೆಯುತ್ತೆ ವಿಶೇಷ ಪೂಜೆ

ravana
01/10/2025

ಉತ್ತರ ಪ್ರದೇಶ: ದಸರಾ ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಅಕ್ಟೋಬರ್ 2ರಂದು ಉತ್ತರ ಭಾರತದ ಕಡೆಗಳಲ್ಲಿ ರಾವಣನ ಪ್ರತಿಕೃತಿ ದಹಿಸುವ ಆಚರಣೆಗಳು ನಡೆಯುತ್ತದೆ ಆದರೆ, ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ರಾವಣನನ್ನು ದೇವರು ಎಂದು ಪೂಜಿಸುತ್ತಾರೆ.


Provided by

ಗ್ರೇಟರ್ ನೋಯ್ಡಾ ಬಳಿಯ ಬಿಸ್ರಾಖ್‌ ನಲ್ಲಿ ರಾವಣ ಜನಿಸಿರುವುದಾಗಿ ಜನರು ನಂಬುತ್ತಾರೆ. ಈ ಗ್ರಾಮದಲ್ಲಿರುವ ಶಿವನ ಮಂದಿರದಲ್ಲಿ ರಾವಣನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿ ರಾವಣನ ಪ್ರತಿಕೃತಿಯನ್ನು ಎಂದಿಗೂ ಸುಟ್ಟಿಲ್ಲ, ಮುಂದೆಯೂ ಅಂತಹ ಆಚರಣೆಯನ್ನ ಇಲ್ಲಿ ಸ್ಥಳೀಯರು ನಡೆಸುವುದಿಲ್ಲ.

ಇಲ್ಲಿನ ನಿವಾಸಿಯಾಗಿರುವ ಕೃಷ್ಣ ಕುಮಾರ್ ಎಂಬವರು ಮಾಧ್ಯಮಗಳ ಜೊತೆಗೆ ಮಾತನಾಡಿ, “ನಾವು ರಾವಣನನ್ನು ನಮ್ಮ ಅಜ್ಜ ಅಥವಾ ತಂದೆಯಂತೆ ಪರಿಗಣಿಸುತ್ತೇವೆ. ಅದಕ್ಕಾಗಿಯೇ ನಾವು ಅವನ ಪ್ರತಿಮೆಯನ್ನು ಇಲ್ಲಿ ಸುಡುವುದಿಲ್ಲ ಎಂದು ಹೇಳಿದ್ದಾರೆ.

ಮತ್ತೊಬ್ಬ ಗ್ರಾಮಸ್ಥ ಸಂಜೀವ್, “ರಾವಣನು ಇಲ್ಲಿ ಈ ಶಿವಲಿಂಗವನ್ನು ಪೂಜಿಸಿದನು. ಇದು ಪ್ರಾಚೀನ ಶಿವ ದೇವಾಲಯ. ಇಲ್ಲಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ, ಆದರೆ ಯಾವುದೇ ಪ್ರತಿಮೆಯನ್ನು ಎಂದಿಗೂ ಸುಡುವುದಿಲ್ಲ” ಎಂದಿದ್ದಾರೆ.

ಬಿಸ್ರಾಖ್ ಗ್ರಾಮವನ್ನು ಮೊದಲು ವಿಶ್ವೇಶರ ಎಂದು ಕರೆಯಲಾಗುತ್ತಿತ್ತು, ಇದನ್ನು ರಾವಣನ ತಂದೆ ವಿಶ್ರವನ ಹೆಸರಿಡಲಾಗಿದೆ. ತ್ರೇತಾಯುಗದಲ್ಲಿ, ಋಷಿ ವಿಶ್ರವ ಇಲ್ಲಿ ಜನಿಸಿದನು ಮತ್ತು ಅವನು ಶಿವಲಿಂಗವನ್ನು ಸ್ಥಾಪಿಸಿದನು, ಇದನ್ನು ರಾವಣನು ಪೂಜಿಸಿದ್ದಾನೆಂದು ನಂಬಲಾಗಿದೆ.

ಇನ್ನೂ  ರಾವಣನನ್ನು ಪೂಜಿಸುವ ಏಕೈಕ ಸ್ಥಳ ಇದಲ್ಲ. ಕಾನ್ಪುರದ ದಶಾನನ್ ದೇವಾಲಯವು ದಸರಾದಂದು ಭಕ್ತರಿಗೆ ಬಾಗಿಲು ತೆರೆಯುತ್ತದೆ. ಜನರು ಈ ದಿನದಂದು “ಜೈ ಲಂಕೇಶ್” ಮತ್ತು “ಲಂಕಾಪತಿ ನರೇಶ್ ಕಿ ಜೈ ಹೋ” ಎಂದು ಜಪಿಸುತ್ತಾರೆ. ಈ ದೇವಾಲಯದಲ್ಲಿ ರಾವಣನನ್ನು ಶಿವ ಮತ್ತು ಚಿನ್ಮಸ್ತಿಕಾ ದೇವಿಯ ರಕ್ಷಕನಾಗಿ ಪೂಜಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನೊಂದೆಡೆ ರಾಮಾಯಣ ನಡೆದೇ ಇಲ್ಲ, ರಾಮ ರಾವಣನನ್ನು ಕೊಂದೇ ಇಲ್ಲ. ರಾವಣ ಶ್ರೀಲಂಕಾದ ಬೌದ್ಧ ಮಹಾರಾಜನಾಗಿದ್ದ. ಆತನ ಆಸ್ಥಾನ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿತ್ತು. ಅಂದಿನ ಕಾಲದಲ್ಲೇ ರಾವಣ ವಿಮಾನದ ಪರಿಕಲ್ಪನೆಯನ್ನು ಹೊಂದಿದ್ದ ಎಂಬಿತ್ಯಾದಿ ವಾದಗಳಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ