ಪ್ಯಾಲೆಸ್ತೀನ್ ಪರ ಇಟೆಲಿಯಲ್ಲಿ ಭಾರೀ ಪ್ರತಿಭಟನೆ: 60ಕ್ಕೂ ಹೆಚ್ಚು ಪೊಲೀಸರಿಗೆ ಗಾಯ

ರೋಮ್: ಪ್ಯಾಲೆಸ್ತೀನ್ ಪರ ಇಟೆಲಿಯಲ್ಲಿ ಭಾರೀ ಪ್ರತಿಭಟನೆ ಆರಂಭಗೊಂಡಿದ್ದು, ಇಸ್ರೇಲ್ ದಾಳಿ ಮತ್ತು ಪ್ರಧಾನಿ ಜಾರ್ಜಿಯಾ ನೇತೃತ್ವದ ಸರ್ಕಾರವು ಪ್ಯಾಲೆಸ್ತೀನ್ ಅನ್ನು ಅಧಿಕೃತ ರಾಷ್ಟ್ರವಾಗಿ ಗುರುತಿಸಿದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇಟೆಲಿಯ ಪ್ರಮುಖ ನಗರಗಳಲ್ಲಿ ಸೋಮವಾರ ಭಾರೀ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.
ಮಿಲನ್ ಕೇಂದ್ರ ರೈಲು ನಿಲ್ದಾಣದಲ್ಲಿ ಕಪ್ಪು ಬಟ್ಟೆ ತೊಟ್ಟ ಪ್ರತಿಭಟನಾಕಾರರು ರೈಲಿನ ಕಿಟಕಿಗಳನ್ನು ಒಡೆದು ಹಾಕಿದ್ದು, ಪೊಲೀಸರ ಮೇಲೆ ಕುರ್ಚಿಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದು, ಹಲವರನ್ನು ಬಂಧಿಸಿದ್ದಾರೆ.
ವೆನಿಸ್ ನಲ್ಲಿ ಕೂಡ ಪೊಲೀಸರು ಪ್ರತಿಭಟನಾಕಾರರನ್ನು ಜಲಫಿರಂಗಿ ಬಳಸಿ ಚದುರಿಸಿದ್ದಾರೆ. ಜಿನೋವಾ, ಲಿವೋರ್ನೊ ಹಾಗೂ ಟ್ರೈಸ್ಟೆ ಬಂದರುಗಳಲ್ಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿದ್ದು, ಇಟೆಲಿಯಿಂದ ಗಾಝಾ ಯುದ್ಧಕ್ಕಾಗಿ ಶಸ್ತ್ರಾಸ್ತ್ರ ಸಾಗಾಟವನ್ನು ತಡೆಯಲು ಒತ್ತಾಯಿಸಿದ್ದಾರೆ.
ಇನ್ನೂ ರೋಮ್ ನಲ್ಲಿಯೂ ಭಾರೀ ಪ್ರತಿಭಟನೆ ನಡೆದಿದ್ದು, ರೈಲು ನಿಲ್ದಾಣದ ಹೊರಗೆ ಸಾವಿರಾರು ಜನರು ಜಮಾಯಿಸಿ, ಪ್ಯಾಲೆಸ್ತೀನ್ ಗೆ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD