ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮತ್ತೆ ಮೂವರು ಹಿಂದುತ್ವ ಮುಖಂಡರಿಗೆ ಕೊಲೆ ಬೆದರಿಕೆ!? - Mahanayaka
3:46 AM Wednesday 17 - September 2025

ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮತ್ತೆ ಮೂವರು ಹಿಂದುತ್ವ ಮುಖಂಡರಿಗೆ ಕೊಲೆ ಬೆದರಿಕೆ!?

karavali
04/05/2025

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮತ್ತೆ ಹಲವು ಹಿಂದುತ್ವ ಮುಖಂಡರಿಗೆ  ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗಿರುವ ಬಗ್ಗೆ ವರದಿಯಾಗಿದೆ. ಸುಹಾಸ್ ಶೆಟ್ಟಿ ಹತ್ಯೆಗೂ ಮೊದಲು ಇಂತಹ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಮೂವರು ಹಿಂದುತ್ವ ನಾಯಕರಿಗೆ ಕೊಲೆ ಬೆದರಿಕೆ ಹಾಕಲಾಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಆಗ್ತಿದೆ.


Provided by

ಸುಹಾಸ್ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಮುಂದಿನ ಟಾರ್ಗೆಟ್ ಶರಣ್ ಪಂಪ್ ವೆಲ್ ಮತ್ತು ಭರತ್ ಕುಮ್ಡೇಲ್ ಎಂದು ಬರೆದಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.  ಮೇ 5ರ ರಾತ್ರಿ 9:30ಕ್ಕೆ ನಿನ್ನನ್ನು ಕೊಲ್ಲುತ್ತೇವೆ ಎಂದು ಕಿಡಿಗೇಡಿಗಳು ಭರತ್ ಕುಮ್ಡೇಲ್ ಗೆ  ಬೆದರಿಕೆ ಹಾಕಲಾಗಿದೆ.

ಭರತ್ ಕುಮ್ಡೇಲ್ ಎಸ್ ಡಿಪಿಐ ಮುಖಂಡ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಅಶ್ರಫ್ ಕಲಾಯಿ ಅವರನ್ನು 2017ರ ಜೂನ್ 21ರಂದು ಬಂಟ್ವಾಳದ ಬೆಂಜನಪದವು ಎಂಬಲ್ಲಿ ಬರ್ಬರವಾಗಿ ಹತ್ಯೆ ನಡೆಸಲಾಗಿತ್ತು. ಈ ಕೊಲೆಗೆ ಪ್ರತಿಕಾರವಾಗಿ ಶರತ್ ಮಡಿವಾಳ ಕೊಲೆ ನಡೆಸಿತ್ತು. ಇದೀಗ ಅಶ್ರಫ್ ನನ್ನು ಕೊಂದ ಭರತ್ ನನ್ನು ಮರೆತಿಲ್ಲ,  Wait And wach ಎಂದು  On fixed leader ಎಂಬ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.

ಭರತ್ ಕುಮ್ಡೇಲು, ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಜೊತೆಗೆ ಶ್ರೀಜಿತ್ ಅಲಿಯಾಸ್ ಶ್ರೀಜುಗೂ ಬೆದರಿಕೆ ಹಾಕಲಾಗಿದೆ Killers target ಎಂಬ ಪೇಜ್ ನಿಂದ ಈ ಪೋಸ್ಟ್ ಹಾಕಲಾಗಿತ್ತು. ಇದೀಗ ಮತ್ತೆ Abu_Sifiyan678 ಪೇಜ್ ನಿಂದ ಮೆಸೆಜ್ ಕಳುಹಿಸಲಾಗಿದೆ. ಎಲ್ಲಿದ್ದೀಯಾ ನೀನು ನೆಕ್ಟ್ಸ್ ನೀನೆ ಎಂದು ಮೆಸೆಜ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಕೇರಳದ ಉಪ್ಪಳ ನಿವಾಸಿಯಾಗಿರುವ ಶ್ರೀಜಿತ್ 2018ರ ಜನವರಿಯಲ್ಲಿ ನಡೆದ ಬಶೀರ್ ಹತ್ಯೆಯ ಆರೋಪಿಯಾಗಿದ್ದಾನೆ. ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತಿಕಾರಕ್ಕೆ ಬಶೀರ್ ನನ್ನು ಕೊಲೆ ಮಾಡಲಾಗಿತ್ತು. ಇದೀಗ ಶ್ರೀಜಿತ್ ಗೂ ಕೊಲೆ ಬೆದರಿಕೆ ಹಾಕಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ