ದೆಹಲಿಗೆ ಹಾರಿದ ಕಾಂಗ್ರೆಸ್ ಶಾಸಕರ ಮೂರು ತಂಡ: ಸಚಿವ ಸ್ಥಾನಕ್ಕೆ ಬೇಡಿಕೆ! - Mahanayaka

ದೆಹಲಿಗೆ ಹಾರಿದ ಕಾಂಗ್ರೆಸ್ ಶಾಸಕರ ಮೂರು ತಂಡ: ಸಚಿವ ಸ್ಥಾನಕ್ಕೆ ಬೇಡಿಕೆ!

congress mla
19/05/2023


Provided by

ಬೆಂಗಳೂರು:  ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಕರ್ನಾಟಕ ಸರ್ಕಾರದ ಆಡಳಿತದ ಜವಾಬ್ದಾರಿಯನ್ನು ಹೈಕಮಾಂಡ್ ಹೆಗಲಿಗೇರಿಸಿದೆ. ನಾಳೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಶುರುವಾಗಲಿದೆ.

ಈ ನಡುವೆ, ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸೇರಲು ಶಾಸಕರ ನಡುವೆ ಪೈಪೋಟಿ ಆರಂಭವಾಗಿದೆ.  ಸಿದ್ದರಾಮಯ್ಯ ದೆಹಲಿಗೆ ಹೋಗುವ ಮೊದಲೇ ಸಚಿವ ಸ್ಥಾನ ಆಕಾಂಕ್ಷಿ ಶಾಸಕರ ತಂಡಗಳು ದೆಹಲಿಗೆ ಪ್ರಯಾಣ ಬೆಳೆಸಿವೆ.

ಇಂದು ಬೆಳಗ್ಗೆ 6ರಿಂದ 7 ಗಂಟೆಗೆ ಮೂರು ವಿಮಾನಗಳಲ್ಲಿ ಒಟ್ಟು 22 ಶಾಸಕರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.  ಮೊದಲ ಗುಂಪಿನಲ್ಲಿ  ಶಾಸಕರಾದ ಕೆ.ಸಿ.ವೀರೇಂದ್ರ, ಗೋವಿಂದಪ್ಪ, ಡಿ.ಸುಧಾಕರ್, ರಘುಮೂರ್ತಿ ಟಿ., ಅಜಯ್ ಸಿಂಗ್, ಯಶ್ವಂತ್ ರಾಜ್ ಗೌಡ ಪಾಟೀಲ್, ಎಂ.ಸಿ.ಸುಧಾಕರ್, ಪ್ರದೀಪ್ ಈಶ್ವರ್ ಮತ್ತು ಬೇಲೂರು ಗೋಪಾಲಕೃಷ್ಣ ದೆಹಲಿಗೆ ತೆರಳಿದರು.

ಎರಡನೇ ತಂಡದಲ್ಲಿ  ಕೃಷ್ಣಭೈರೇಗೌಡ, ಎನ್.ಎ.ಹ್ಯಾರಿಸ್, ಶ್ರೀನಿವಾಸ್ ಮಾನೆ, ರಿಝ್ವಾನ್ ಹರ್ಷದ್, ಈಶ್ವರ್ ಖಂಡ್ರೆ, ರಹೀಂಖಾನ್ ತೆರಳಿದ್ದಾರೆ.

ಮೂರನೇ ತಂಡದಲ್ಲಿ  ಕೆ.ಹೆಚ್.ಮುನಿಯಪ್ಪ, ಶಿವರಾಜ್ ತಂಗಡಗಿ, ಸಿ.ಎಸ್.ನಾಡಗೌಡ, ಅಶೋಕ್ ರೈ, ಕೆ.ಎನ್.ರಾಜಣ್ಣ, ಕೆ.ಆರ್.ರಾಜೇಂದ್ರ, ಎಂ.ಎಲ್.ಸಿ. ಅರವಿಂದ ಅರಳಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ