ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಮುಂದಾದ ಪುಂಡರು: ರೊಚ್ಚಿಗೆದ್ದ ಆನೆ ತೋರಿಸಿತು ರೌದ್ರಾವತಾರ - Mahanayaka
4:03 PM Thursday 23 - October 2025

ಕಾಡಾನೆ ಜೊತೆ ಸೆಲ್ಫಿ ತೆಗೆಯಲು ಮುಂದಾದ ಪುಂಡರು: ರೊಚ್ಚಿಗೆದ್ದ ಆನೆ ತೋರಿಸಿತು ರೌದ್ರಾವತಾರ

chamarajanagara
19/06/2023

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿಗೆ ಇಳಿದ ಕಾಡಾನೆ ಮುಂದೆ ಸೆಲ್ಫಿ ತೆಗೆಯಲು ಮುಂದಾದ ಯುವಕರು ಸ್ವಲ್ಪದರಲ್ಲೇ ಪಾರಾದ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಅಸನೂರು ಬಳಿ‌ ನಡೆದಿದೆ.

ಕಾಡಾನೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಪುಂಡರು ಆನೆಯ ಹಿಂದೆ ಮೊಬೈಲ್ ಹಿಡಿದುಕೊಂಡು ಸೆಲ್ಪಿಗಾಗಿ ಹಿಂಬಾಲಿಸಿದ್ದು, ಈ ವೇಳೆ ಏಕಾಏಕಿ ಆನೆ ತಿರುಗಿಬಿದ್ದಿದೆ.

ತಕ್ಷಣವೇ ಕಾರ್ ಹತ್ತಿದ ಪುಂಡರು ಆನೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದೇ ವೇಳೆ ರೊಚ್ಚಿಗೆದ್ದ ಕಾಡಾನೆ ಹೆದ್ದಾರಿಯಲ್ಲಿ ಬರುತ್ತಿದ್ದ ಎರಡು ಬೈಕ್ ನ್ನು ಜಖಂ ಮಾಡಿದೆ.  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ  ಆನೆ ರಸ್ತೆಯಲ್ಲೇ ನಿಂತು ವಾಹನ ಸಂಚಾರಕ್ಕೆ ಅಡ್ಡಿಪಡಿಸಿತು.

ಈ ಆನೆ ಆಗಾಗ ರಸ್ತೆಗೆ ಇಳಿಯುತ್ತದೆ. ಕಬ್ಬು ಹಾಗೂ ತರಕಾರಿ ಲಾರಿಗಳನ್ನು ಅಡ್ಡಗಟ್ಟುತ್ತಿದೆ. ಆದ್ರೆ ಇಂದು ಯುವಕರ ವಿರುದ್ಧ ತಿರುಗಿ ಬಿದ್ದ ಆನೆ ರೌದ್ರಾವತಾರ ತೋರಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ