ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ,ಕೊಡಗು, ಶಿವಮೊಗ್ಗ, ಉತ್ತರ ಒಳನಾಡಿನ ಯಾದಗಿರಿ, ಕಲಬುರಗಿಯಲ್ಲಿ ಇಂದಿನಿಂದ ಮೇ 17ರವರೆಗೆ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ಮಳೆಯಾಗಿದೆ, ಇಂದು ಕೂಡ ಮಳೆ ಮುಂದುವರಿಯಲಿದೆ. ಪುತ್ತೂರು, ರಾಯಚೂರು, ಉಪ್ಪಿನಂಗಡಿ, ಕೊಟ್ಟಿಗೆಹಾರ, ಗಬ್ಬೂರಿನಲ್ಲಿ ಹೆಚ್ಚು ಮಳೆಯಾಗಿದೆ. ಕಡೂರು, ಕೊಪ್ಪ, ಹುಣಸೂರು, ಕುರ್ಡಿ,ಔರಾದ್, ಚಿಕ್ಕಮಗಳೂರು, ಕಳಸ, ಗುತ್ತಲ್, ತುಮಕೂರು, ಯುಗಟಿ, ತಿಪಟೂರು, ಕೆಆರ್ನಗರ, ಚನ್ನರಾಯಪಟ್ಟಣ, ಗೋಕರ್ಣ, ಮಾಣಿ, ಗುಬ್ಬಿ, ತರೀಕೆರೆ, ಮಧುಗಿರಿ, ಪರಶುರಾಂಪುರ, ಕುಡತಿನಿ, ಬರಗೂರು, ಕಮ್ಮರಡಿ,ಹಿರಿಯೂರು, ಆಗುಂಬೆಯಲ್ಲಿ ಮಳೆಯಾಗಿದೆ.
ಸೇಡಬಾಳ, ಹಾವೇರಿ, ಬೆಳಗಾವಿ, ಜೋಯಿಡಾ, ಪಣಂಬೂರು, ಮೈಸೂರು, ಚಿತ್ರದುರ್ಗ, ರಾಮನಗರ, ಚಿಂತಾಮಣಿ, ಮಾನ್ವಿ, ಸವಣೂರು, ಧರ್ಮಸ್ಥಳ, ಸಂಕೇಶ್ವರ, ಗೇರುಸೊಪ್ಪ, ಧರ್ಮಸ್ಥಳ, ಜಯಪುರ, ಭಾಗಮಂಡಲ, ದಾವಣಗೆರೆ, ಸೋಮವಾರಪೇಟೆ, ಬೇಲೂರು, ನಾಯಕನಹಟ್ಟಿಯಲ್ಲಿ ಮಳೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97