“ತಿರುಪತಿ ನಾಮ” ಅನ್ನೋದು ಅವಮಾನಕರ ಶಬ್ಧವೇ?: ಶಿಕ್ಷಕನ ವಿರುದ್ಧ ಪತ್ರ ಬರೆದ ಎಸ್.ಸುರೇಶ್ ಕುಮಾರ್ ಗೆ ನೆಟ್ಟಿಗರ ಪ್ರಶ್ನೆ - Mahanayaka

“ತಿರುಪತಿ ನಾಮ” ಅನ್ನೋದು ಅವಮಾನಕರ ಶಬ್ಧವೇ?: ಶಿಕ್ಷಕನ ವಿರುದ್ಧ ಪತ್ರ ಬರೆದ ಎಸ್.ಸುರೇಶ್ ಕುಮಾರ್ ಗೆ ನೆಟ್ಟಿಗರ ಪ್ರಶ್ನೆ

suresh kumar
18/07/2023


Provided by

ಚಂದ್ರಯಾನದ ಬಗ್ಗೆ  ಶಿಕ್ಷಕರೊಬ್ಬರು ಅನಾರೋಗ್ಯಕರವಾದ ಟ್ವೀಟ್ ಮಾಡಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವರು ಹಾಗೂ ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಎಸ್.ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ ಪತ್ರ ಬರೆದಿದ್ದಾರೆ.

ಕಳೆದ ಶುಕ್ರವಾರ ಚಂದ್ರಯಾನ—3 ಉಡಾವಣೆ ಯಶಸ್ವಿಯಾದಾಗ ಇಡೀ ದೇಶವೇ ಹಾರೈಸಿತ್ತು, ಅನೇಕ ಕಡೆಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗಿತ್ತು, ಆದ್ರೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ಹುಲಿಕುಂಟೆ ಮೂರ್ತಿರವರು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವನ್ನಾಗಿ ತೋರಿದ್ದಾರೆ. ಆ ದಿನವೇ ಈ ಮಹನೀಯ ಉಪನ್ಯಾಸಕ ತನ್ನ ಟ್ವಿಟ್ಟರ್ ಅಕೌಂಟ್  ಮೂಲಕ “ಚಂದ್ರಯಾನ ಈ ಸಲ ತಿರುಪತಿ ನಾಮವೇ ಗತಿ ಅನ್ಸತ್ತೆ ಎಂದು ಪೋಸ್ಟ್ ಮಾಡಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.

ಇಂತಹ ವ್ಯಕ್ತಿ ನಮ್ಮ ವಿದ್ಯಾರ್ಥಿಗಳಿಗೆ ಯಾವ ರೀತಿಯ ಪ್ರೇರಣೆ ಕೊಡಲು ಸಾಧ್ಯ? ಎಂದು ಪ್ರಶ್ನಿಸಿರುವ ಸುರೇಶ್ ಕುಮಾರ್ ಅವರು, ಈ ಬಗ್ಗೆ ಹುಲಿಕುಂಟೆ ಮೂರ್ತಿ ಅವರಲ್ಲಿ ಸೃಷ್ಟೀಕರಣ ಕೇಳುವುದು ಮತ್ತು ಬೇಜವಾಬ್ದಾರಿಯ ನಡವಳಿಕೆ ಉಪನ್ಯಾಸಕರಿಂದ ಮತ್ತೆ ಜರುಗದಂತೆ ಎಚ್ಚರಿಕೆ ನೀಡಬೇಕು ಎಂದು ಶಿಕ್ಷಣ ಸಚಿವರಿಗೆ ಸುರೇಶ್ ಕುಮಾರ್ ಹೇಳಿದ್ದಾರೆ.

ಸದ್ಯ ಸುರೇಶ್ ಕುಮಾರ್ ಅವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೀಡಾಗಿದೆ. ಅಷ್ಟಕ್ಕೂ “ತಿರುಪತಿ ನಾಮ” ಎನ್ನುವುದು ಒಂದು ಅವಮಾನಕರ ಶಬ್ಧವೇ? ಒಂದು ವೇಳೆ ಅದು ಅವಮಾನಕರ ಶಬ್ಧವೇ ಆಗಿದ್ದರೆ, ಸರ್ಕಾರ ಹಾಗೂ ಬಿಜೆಪಿ ಶಾಸಕರಾಗಿರುವ ಸುರೇಶ್ ಕುಮಾರ್ ಅವರು ಅದನ್ನು ಬಹಿರಂಗವಾಗಿ ಹೇಳಲಿ ಅನ್ನೋ ಅಭಿಪ್ರಾಯಗಳು ಕೂಡ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ