“ಅಪಘಾತ ಹೇಗಾಯ್ತು?” ಎಂದು ಕೇಳಿದಕ್ಕೆ “ಟಿಶ್ಕ್ಯಾವ್” ಅಂತ ಆಯ್ತು ಎಂದ ಜಗ್ಗೇಶ್ ಪುತ್ರ! - Mahanayaka
4:06 PM Wednesday 15 - October 2025

“ಅಪಘಾತ ಹೇಗಾಯ್ತು?” ಎಂದು ಕೇಳಿದಕ್ಕೆ “ಟಿಶ್ಕ್ಯಾವ್” ಅಂತ ಆಯ್ತು ಎಂದ ಜಗ್ಗೇಶ್ ಪುತ್ರ!

yathiraj
02/07/2021

ಬೆಂಗಳೂರು: ಜಗ್ಗೇಶ್ ಪುತ್ರ ಯತಿರಾಜ್ ಕಾರು ನಿನ್ನೆ ಅಪಘಾತವಾಗಿತ್ತು. ಅಪಘಾತದ ಬಳಿಕ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನಿನ್ನೆ ಮಾಧ್ಯಮವೊಂದು  ಅವರ ಪ್ರತಿಕ್ರಿಯೆ ಪಡೆಯಲು ಮುಂದಾಗಿದ್ದರೂ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.


Provided by

ಇಂದು ಅವರು ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆಯೇ ಪತ್ರಕರ್ತರು, ಸರ್ ಅಪಘಾತ ಹೇಗಾಯ್ತು ಎಂದು ಪ್ರಶ್ನಿಸಿದರು. ಈ ವೇಳೆ ಅವರು “ಟಿಶ್ಕ್ಯಾವ್” ಅಂತ ಎಗರಿ ಬಿಡ್ತು ಗಾಡಿ  ಅಷ್ಟೆ ಬೇರೇನೂ ಆಗಿಲ್ಲ ಎನ್ನುತ್ತಾ ಕಾರ್ ಹತ್ತಿದ್ದಾರೆ.

ಈ ವೇಳೆ ಮಾಧ್ಯಮಗಳು, ಸಾರ್, ಅಪಘಾತದ ಬಗ್ಗೆ ಸಾರ್ವಜನಿಕರು ಬೇರೆ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಿಜವಾಗಿಯೂ ನಿಮ್ಮ ಕಾರಿಗೆ ನಾಯಿ ಅಡ್ಡ ಬಂದಿದ್ದೇ? ಎಂದು ಪ್ರಶ್ನಿಸಿದ್ದಾರೆ.

“ಬಂತು ಸಾರ್, ನಾನು ನನ್ನ ಪಾಡಿಗೆ ಗಾಡಿ ಓಡಿಸ್ತಿದ್ದೆ, ನಾಯಿ ಅಡ್ಡ ಬಂತು ಎಂದು ಉತ್ತರಿಸಿದ್ದಾರೆ. ಅಪಘಾತ ನಡೆದ ಬಳಿಕ, ಯತೀಂದ್ರ ಕಾರು ವಿಪರೀತ ವೇಗವಾಗಿತ್ತು ಎಂದು ಸಾರ್ವಜನಿಕರು ಆರೋಪಿಸಿದ್ದರು.

ಕಾರು ಟಿಶ್ಕ್ಯಾವ್ ಅಂತ ಎಗರಿ ಬಿಡ್ತು ಎನ್ನುವ  ಯತಿರಾಜ್ ಹೇಳಿಕೆಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಅಪ್ಪ ಸಮಾಜಕ್ಕೆ ಏನೇನೋ ಸಂದೇಶ ಕೊಡ್ತಿದ್ದಾರೆ. ಮಗ ಮಾಧ್ಯಮಗಳ ಜೊತೆಗೆ ಕನಿಷ್ಠ ಸೌಜನ್ಯ ಕೂಡ ತೋರದೇ, ನಿರ್ಲಕ್ಷ್ಯತನದಿಂದ ಮಾತನಾಡುತ್ತಿದ್ದಾರೆ. ಟಿಶ್ಕ್ಯಾವ್ ಅಂತ ಪ್ರಾಣ ಹೋಗಿರುತ್ತಿದ್ದರೆ? ಎಂದು ಪ್ರಶ್ನಿಸಿರುವ ಜನರು ಇಷ್ಟು ಸುಲಭವಾಗಿ ಯಾವುದನ್ನೂ ಪರಿಗಣಿಸಬಾರದು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ