ಟೊಮೆಟೊ ದುಬಾರಿ ಬೆಲೆ ಹಿನ್ನಲೆ: ಟೊಮಾಟೋ ಗಾಡಿ ಕಳ್ಳತನ! - Mahanayaka
6:12 PM Tuesday 18 - November 2025

ಟೊಮೆಟೊ ದುಬಾರಿ ಬೆಲೆ ಹಿನ್ನಲೆ: ಟೊಮಾಟೋ ಗಾಡಿ ಕಳ್ಳತನ!

tomato
10/07/2023

ಬೆಂಗಳೂರು: ಟೊಮೆಟೊ ಗಾಡಿಯನ್ನೇ ಕದ್ದಿರುವ ಘಟನೆ ಯಶವಂತಪುರದ ಆರ್‌ಎಂಸಿ ಯಾರ್ಡ್‌ನಲ್ಲಿ ನಡೆದಿದೆ.

ಘಟನೆಯ ನಂತರ ಮಾತನಾಡಿದ  ಚಾಲಕ ಶಿವಣ್ಣ  “ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕೋಲಾರಕ್ಕೆ ಟೊಮೆಟೊ ಸಾಗಿಸುತ್ತಿದ್ದೆವು. ಸುಮಾರು 2 ಟನ್ ತೂಗುವಷ್ಟು ಟೊಮೆಟೊ ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದೆವು”. ಶನಿವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ ರಿಂಗ್ ರಸ್ತೆಯಲ್ಲಿ ಅಪಘಾತ ನಡೆಯಿತು.

ಕಾರಿನಲ್ಲಿದ್ದ ನಾಲ್ವರು ಗಲಾಟೆ ಮಾಡಿದರು. ಗಾಡಿ ಗುದ್ದಿದ್ದಕ್ಕೆ ಅವರು 10 ಸಾವಿರ ಹಣ ಕೊಡುವಂತೆ ಗಲಾಟೆ ಮಾಡಿದರು. ಆದರೆ ನಮ್ಮ ಹತ್ರ ಅಷ್ಟು ಹಣ ಇಲ್ಲ ಎಂದ್ವಿ. ಬಳಿಕ ಅವರು ನಮ್ಮನ್ನು ಕಾರಿನಲ್ಲಿ ಕೂರಿಸಿಕೊಂಡು ಬುದಿಗೆರೆ ರಸ್ತೆಗೆ ಕರೆದುಕೊಂಡು ಹೋದರು. ಅಲ್ಲಿನ ಖಾಲಿ ಜಾಗದಲ್ಲಿ ನಮ್ಮನ್ನು ಇಳಿಸಿ, ಟೊಮೆಟೊ ವಾಹನದ ಸಮೇತ ಖದೀಮರು ಸುಮಾರು 250ಕ್ಕೂ ಹೆಚ್ಚು ಟ್ರೇಗಳಲ್ಲಿದ್ದ ಟೊಮೆಟೊವನ್ನು ಹೈಜಾಕ್ ಮಾಡಿ ಕೊಂಡೊಯ್ದರು ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ