ಮರ ತಪ್ಪಿಸಲು ಹೋಗಿ ಚರಂಡಿಗೆ ಇಳಿದ ಪ್ರವಾಸಿ ಬಸ್ - Mahanayaka

ಮರ ತಪ್ಪಿಸಲು ಹೋಗಿ ಚರಂಡಿಗೆ ಇಳಿದ ಪ್ರವಾಸಿ ಬಸ್

kalasa
29/04/2025


Provided by

ಚಿಕ್ಕಮಗಳೂರು:  ಮಲೆನಾಡ ಭಾರೀ ಗಾಳಿ—ಮಳೆಗೆ ಮರವೊಂದು ಮುರಿದು ಬಿದ್ದಿದ್ದು, ಮರ ತಪ್ಪಿಸಲು ಹೋಗಿ ಪ್ರವಾಸಿ ಬಸ್ ಚರಂಡಿಗೆ ಇಳಿದ ಘಟನೆ ನಡೆದಿದೆ.

ಚರಂಡಿಗೆ ಇಳಿದ ಬಸ್ ಚಾಲಕನ ಚಾಕಚಕ್ಯತೆಯಿಂದ ಪಲ್ಟಿಯಾಗೋದು ತಪ್ಪಿದೆ. 40 ಪ್ರಯಾಣಿಕರಿದ್ದ ಪ್ರವಾಸಿ ಬಸ್ ಅಪಾಯದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ.

ಬಾಳೆಹೊನ್ನೂರು-ಕಳಸ ಮಾರ್ಗ ಮಧ್ಯೆ ಈ  ಘಟನೆ  ನಡೆದಿದೆ. ಒಂದೆಡೆ ಮರ, ಮತ್ತೊಂದೆಡೆ ಬಸ್ ನಿಂದಾಗಿ ರಸ್ತೆಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಸುಮಾರು 2 ಕಿ.ಮೀ. ಟ್ರಾಫಿಕ್ ಜಾಮ್ ನಲ್ಲಿ ವಾಹನ ಸವಾರರು, ಪ್ರಯಾಣಿಕರು ಪರದಾಡಿದರು.

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಬಂದಿದ್ದ ಪ್ರವಾಸಿ ಬಸ್ ಅಪಘಾತಕ್ಕೀಡಾದ ಬಸ್ ಆಗಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ನೂರಪಾಲ್ ನಲ್ಲಿ ಈ  ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ