ಚರಂಡಿಗೆ ಇಳಿದ ಪ್ರವಾಸಿಗರ ಕಾರು!

25/07/2025
ಚಿಕ್ಕಮಗಳೂರು: ದತ್ತಪೀಠದಿಂದ ಬರುವಾಗ ಪ್ರವಾಸಿಗರ ಕಾರು ಚರಂಡಿಗೆ ಇಳಿದ ಘಟನೆ ದತ್ತಪೀಠ–ಮುಳ್ಳಯ್ಯನಗಿರಿ ಮಾರ್ಗ ಮಧ್ಯೆ ನಡೆದಿದೆ.
ಎದುರಿನ ವಾಹನಕ್ಕೆ ಸೈಡ್ ಕೊಡಲು ಹೋಗಿ ಮಾರುತಿ ರಿಡ್ಜ್ ಕಾರು ರಸ್ತೆಯಿಂದ ಕೆಳಗಿಳಿದಿದೆ. ಕಾರಿನಲ್ಲಿದ್ದ ಐವರಿಗೂ ಯಾವುದೇ ತೊಂದರೆಯಾಗಿಲ್ಲ, ರಸ್ತೆಯ ಬಲ ಭಾಗದಲ್ಲಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.
ತುಮಕೂರಿನಿಂದ ದತ್ತಪೀಠ, ಮುಳ್ಳಯ್ಯನಗಿರಿಗೆ ಪ್ರವಾಸ ಬಂದಿದ್ದ ಪ್ರವಾಸಿಗರ ಕಾರು ರಸ್ತೆಯ ಬದಿಗೆ ಇಳಿದಿದೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಾರಿನಲ್ಲಿದ್ದ ಪ್ರವಾಸಿಗರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: