ಬಂಡೆಗಳ ಮೇಲೆ ದಾಟಿ ನೀರಿನ ಮಧ್ಯೆ ಕುಳಿತ ಪ್ರವಾಸಿಗರು: ಏಕಾಏಕಿ ಹೆಚ್ಚಾಯ್ತು ನೀರು.. ಮುಂದೆ ಆಗಿದ್ದೇನು?

ಕೊಳ್ಳೇಗಾಲ: ಕಾವೇರಿ ನದಿಯ ಸೌಂದರ್ಯ ವೀಕ್ಷಣೆಗೆ ತೆರಳಿ ಅಪಾಯಕ್ಕೆ ಸಿಲುಕಿದ್ದ ಆರು ಜನ ಪ್ರವಾಸಿಗರನ್ನು ತೆಪ್ಪ ನಡೆಸುವ ಕಾರ್ಮಿಕರು ರಕ್ಷಿಸಿದ ಘಟನೆ ನಡೆದಿದೆ.
ಕೊಳ್ಳೇಗಾಲ ತಾಲ್ಲೂಕು ಶಿವನಸಮುದ್ರ ದರ್ಗಾ ಬಳಿಯ ಜಲಪಾತದ ಸಮೀಪ ಈ ದುರ್ಘಟನೆ ನಡೆದಿದೆ. ಬಂಡೆಗಳ ಮೇಲೆ ದಾಟಿ ನೀರಿನ ಮಧ್ಯೆ ಬೆಂಗಳೂರು ಮೂಲದ ಪ್ರವಾಸಿಗರು ಕುಳಿತಿದ್ದರು. ಆದ್ರೆ ಏಕಾಏಕಿ ನೀರು ಹೆಚ್ಚಾದಾಗ ಆತಂಕದಿಂದ ತಮ್ಮನ್ನು ರಕ್ಷಿಸುವಂತೆ ಕೂಗಿಕೊಂಡಿದ್ದಾರೆ.
ತಂಡದಲ್ಲಿ ನಾಲ್ವರು ಮಹಿಳೆಯರು ಬಾಲಕ ಹಾಗೂ ಪುರುಷರಿದ್ದರು. ಸ್ವಲ್ಪ ಯಾಮಾರಿದ್ದರೂ ಅವರು ಪ್ರಪಾತಕ್ಕೆ ಬೀಳುವ ಸಾಧ್ಯತೆಗಳಿದ್ದರು. ತೆಪ್ಪ ನಡೆಸುವವರ ಸಮಯ ಪ್ರಜ್ಞೆಯಿಂದ ಆರು ಜೀವಗಳು ಉಳಿದಿವೆ.
ಕಾವೇರಿ ನದಿಯ ಸೌಂದರ್ಯ ನೋಡಿದ್ರೆ ಮಾರು ಹೋಗದವರಿಲ್ಲ, ಆದ್ರೆ, ನದಿಗಳಲ್ಲಿ ಯಾವಾಗ ಬೇಕಾದ್ರೂ ಏಕಾಏಕಿ ನೀರು ಏರಿಕೆಯಾಗುತ್ತವೆ ಅನ್ನೋ ಅಪಾಯದ ಅರಿವಿಲ್ಲದವರು ಅಪಾಯಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಇಂತಹ ಮಾಹಿತಿಗಳನ್ನೊಳಗೊಂಡ ನಾಮಫಲಕಗಳನ್ನು ಸ್ಥಳದಲ್ಲಿ ಹಾಕಬೇಕಿದೆ. ಆದ್ರೆ ಇಲ್ಲಿ ಯಾವುದೇ ನಾಮಫಲಕಗಳಾಗಲಿ, ಪೊಲೀಸ್ ಭದ್ರತೆಯಾಗಲಿ ಇಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw