ಮಧ್ಯಂತರ ಆದೇಶ ಉಲ್ಲಂಘನೆ: ಪತಂಜಲಿಗೆ ಶಾಕ್ ನೀಡಿದ ಕೋರ್ಟ್ ನ ಆ ಆದೇಶ..! - Mahanayaka

ಮಧ್ಯಂತರ ಆದೇಶ ಉಲ್ಲಂಘನೆ: ಪತಂಜಲಿಗೆ ಶಾಕ್ ನೀಡಿದ ಕೋರ್ಟ್ ನ ಆ ಆದೇಶ..!

10/07/2024


Provided by

ಟ್ರೇಡ್‌ಮಾರ್ಕ್ ಉಲ್ಲಂಘನೆ ಪ್ರಕರಣದಲ್ಲಿ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ ಪತಂಜಲಿ ಆಯುರ್ವೇದ್‌ಗೆ 50 ಲಕ್ಷ ರೂಪಾಯಿ ಠೇವಣಿ ಇಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ. ಟ್ರೇಡ್‌ಮಾರ್ಕ್ ಉಲ್ಲಂಘನೆ ಪ್ರಕರಣದಲ್ಲಿ ಕರ್ಪೂರ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಪತಂಜಲಿಗೆ ಕೋರ್ಟ್ ಆದೇಶಿಸಿತ್ತು. ಆದರೆ ಪತಂಜಲಿ ಆ ನಿಯಮ ಉಲ್ಲಂಘಿಸಿದೆ.

ಮಂಗಳಂ ಆರ್ಗಾನಿಕ್ಸ್ ಲಿಮಿಟೆಡ್‌ ಟ್ರೇಡ್‌ಮಾರ್ಕ್ ಉಲ್ಲಂಘನೆಯ ಆರೋಪ ಮಾಡಿದೆ. ಇದಾದ ಬಳಿಕ 2023ರ ಆಗಸ್ಟ್‌ನಲ್ಲಿ ಮಧ್ಯಂತರ ಆದೇಶದಲ್ಲಿ ಹೈಕೋರ್ಟ್ ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ಕರ್ಪೂರ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಆದೇಶಿಸಿದೆ.
ಪತಂಜಲಿಯು ಜೂನ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕರ್ಪೂರ ಉತ್ಪನ್ನಗಳ ಮಾರಾಟಕ್ಕೆ ತಡೆಯಾಜ್ಞೆ ನೀಡುವ ಹಿಂದಿನ ಆದೇಶದ ಉಲ್ಲಂಘನೆಯನ್ನು ಒಪ್ಪಿಕೊಂಡಿದೆ ಎಂಬುವುದನ್ನು ಜುಲೈ 8ರಂದು ನ್ಯಾಯಮೂರ್ತಿ ಆರ್ ಐ ಚಾಗ್ಲಾ ರ ಏಕ ಪೀಠವು ಗಮನಿಸಿದೆ.

ಪತಂಜಲಿ 2023ರ ಆಗಸ್ಟ್ 30ರ ತಡೆಯಾಜ್ಞೆ ಆದೇಶದ ಇಂತಹ ನಿರಂತರ ಉಲ್ಲಂಘನೆ ಮಾಡುವುದನ್ನು ಈ ನ್ಯಾಯಾಲಯವು ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿ ಚಾಗ್ಲಾ ಆದೇಶದಲ್ಲಿ ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ