ಉಗ್ರ ಶಾರಿಕ್ ಕೃಷ್ಣಮಠದ ಬಳಿ ಸಂಚಾರ ವಿಚಾರ: ಮಂಗಳೂರು ಪೊಲೀಸರಿಂದ ತನಿಖೆ: ಎಸ್ಪಿ - Mahanayaka

ಉಗ್ರ ಶಾರಿಕ್ ಕೃಷ್ಣಮಠದ ಬಳಿ ಸಂಚಾರ ವಿಚಾರ: ಮಂಗಳೂರು ಪೊಲೀಸರಿಂದ ತನಿಖೆ: ಎಸ್ಪಿ

akshai machindra hake
01/12/2022


Provided by

ಮಂಗಳೂರು: ಸ್ಪೋಟ ಪ್ರಕರಣದ ತನಿಖೆಯಲ್ಲಿ ಶಾರೀಕ್ ಉಡುಪಿಗೆ ಬಂದ ಬಗ್ಗೆ ಮಾಹಿತಿ ಲಭ್ಯವಾಗಿದ್ದು. ಆ ಪ್ರಯುಕ್ತ ಮಂಗಳೂರು ಸಿಟಿ ಪೊಲೀಸರು ಉಡುಪಿಗೆ ಬಂದು ವಿಚಾರಣೆ ನಡೆಸಿದ್ದರು. ಅಕ್ಟೋಬರ್ ತಿಂಗಳಲ್ಲಿ ಒಂದು ಬಾರಿ ಈ ಭಾಗದಲ್ಲಿ ಆತ ಪ್ರವಾಸ ಮಾಡಿದ್ದ. ಹೀಗಾಗಿಯೇ ಮಂಗಳೂರು ಪೊಲೀಸರು ತನಿಖೆ ನಡೆಸಿ ಹೋಗಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ಹೇಳಿದರು.

ಮಣಿಪಾಲದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಪೊಲೀಸರು ಈ ಪ್ರಕರಣದ ತನಿಖಾಧಿಕಾರಿಗಳಲ್ಲ. ಈ ಬಗ್ಗೆ ಮಂಗಳೂರು ಪೊಲೀಸರೇ ವಿವರ ಮಾಹಿತಿ ನೀಡುತ್ತಾರೆ ಎಂದರು.

ಮಂಗಳೂರು ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಹತ್ತು ಹಲವಾರು ದೇವಸ್ಥಾನಗಳ ಭದ್ರತೆಯ ಬಗ್ಗೆ ಚರ್ಚಿಸಿದ್ದೇವೆ. ದೇವಸ್ಥಾನಗಳನ್ನು ಒಳಗೊಂಡ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಮಾಡುತ್ತೇವೆ. ನಿಯಮಿತವಾಗಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳುತ್ತೇವೆ. ಮುಜರಾಯಿ ದೇವಸ್ಥಾನಗಳಿಗೆ ಹೊರತಾಗಿ ಭಕ್ತರು ಹೆಚ್ಚು ಬರುವ ದೇವಸ್ಥಾನಗಳ ಬಗ್ಗೆ ನಿಗಾ ಇರಿಸುತ್ತೇವೆ ಎಂದು ತಿಳಿಸಿದರು

ಹೆಜಮಾಡಿ ಟೋಲ್ ನಲ್ಲಿ ಶುಲ್ಕ ಹೆಚ್ಚಳ ವಿರೋಧಿಸಿ ಟೋಲ್‌ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಡಿ.2ರಂದು ಹೋರಾಟಕ್ಕೆ ನೀಡಿವೆ. ನಿನ್ನೆ ಕಾಪುವಿನಲ್ಲಿ ನಾವು ಸಭೆ ನಡೆಸಿ ಟೋಲ್‌ಗೇಟ್ ಹೋರಾಟ ಸಮಿತಿಯವರಿಗೆ ಶಾಂತಿಯುತ ಪ್ರತಿಭಟನೆ ಮಾಡುವಂತೆ ಸೂಚನೆ ನೀಡಿದ್ದೇವೆ. ಹಾಗಾಗಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಗೆ ಧಕ್ಕೆ ತರತದಂತೆ ಶಾಂತಿಯುತ ಪ್ರತಿಭಟನೆ ಮಾಡಬೇಕು. ಒಂದುವೇಳೆ ಸಾರ್ವಜನಿಕ ಆಸ್ತಿಪಾಸ್ತಿ, ಸಂಚಾರಕ್ಕೆ ತೊಂದರೆಯಾದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ