ಆರ್‌ ಸಿಬಿ ಸಂಭ್ರಮಾಚರಣೆ ವೇಳೆ ದುರಂತ: ಗಾಯಾಳುಗಳನ್ನು ಭೇಟಿಯಾದ ವಿಪಕ್ಷ ಬಿಜೆಪಿ - Mahanayaka

ಆರ್‌ ಸಿಬಿ ಸಂಭ್ರಮಾಚರಣೆ ವೇಳೆ ದುರಂತ: ಗಾಯಾಳುಗಳನ್ನು ಭೇಟಿಯಾದ ವಿಪಕ್ಷ ಬಿಜೆಪಿ

bjp
05/06/2025


Provided by

ಬೆಂಗಳೂರು: ಆರ್‌ ಸಿಬಿ ಸಂಭ್ರಮಾಚರಣೆ ಸಂದರ್ಭ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ವಿಪಕ್ಷ ಬಿಜೆಪಿ ನಾಯಕರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಸಂಸದರಾದ ಪಿ.ಸಿ.ಮೋಹನ್‌, ಡಾ. ಕೆ.ಸುಧಾಕರ್‌ ಆಸ್ಪತ್ರೆಗೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದಕ್ಕೂ ಮೊದಲು ವಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಭೇಟಿ ನೀಡಿದ್ದರು.

ಬಸವರಾಜ್‌ ಬೊಮ್ಮಾಯಿ ಮಾತನಾಡಿ, 11 ಜನ ಸಾವನ್ನಪ್ಪಿರೋದು ದುಃಖದ ಸಂಗತಿ. ಕರ್ನಾಟಕದ ನಾಗರಿಕರಿಗೆ ಕೋಪ ಬಂದಿದೆ. ವಿಜಯೋತ್ಸವ ನಿಯಂತ್ರಣ ಮಾಡಲಿಕ್ಕೆ ಆಗಲಿಲ್ಲ ಅಂದರೆ, ಇಡೀ ಕರ್ನಾಟಕ ಜನರ ರಕ್ಷಣೆ ಮಾಡ್ತೀರಾ? ಇದು ಅನಿರೀಕ್ಷಿತ ಅಲ್ಲ, ಯಾಕಂದ್ರೆ ನೀವು ಪ್ಲಾನಿಂಗ್ ಮಾಡಿಲ್ಲ.‌ ಒಂದೇ ಒಂದು‌ ಸಭೆ ಮಾಡಿಲ್ಲ. ಯಾವ ಪ್ಲಾನಿಂಗ್ ಮಾಡಿಲ್ಲ.‌ ಒಟ್ಟಾರೆ ಬೇಜವಾಬ್ದಾರಿ ಇದು. ಈ ಕೊಲೆಗೆ ಸರ್ಕಾರ ನೇರ ಕಾರಣ. ಸಿಎಂ, ಕೆಸಿಎ ಅಂತಾರೆ. ಆದರೆ ಸೆಕ್ಯುರಿಟಿ ಯಾರು‌ ಕೊಡಬೇಕು? ಹಿರಿಯ ಪೊಲೀಸ್ ಅಧಿಕಾರಿಗಳು ಸುಮ್ಮನೆ ಇದ್ರು. ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಫಂಕ್ಷನ್ ಮಾಡದೇ, ರೋಡ್ ಶೋ ಮಾಡಬೇಕಿತ್ತು. ಪುನೀತ್ ರಾಜ್‍ಕುಮಾರ್ ಅವರ ನಿಧನದ ವೇಳೆ, ಹಳೆ ವಿಚಾರದ ಬಗ್ಗೆ ಯೋಚನೆ ಮಾಡಿ, 25 ಲಕ್ಷ ಜನ ಸೇರುವ ನಿರೀಕ್ಷೆ ಇತ್ತು. ಆಗ ನಾವು ಪ್ಲಾನಿಂಗ್‌ ಮಾಡಿದ್ವಿ. ಗೃಹ ಸಚಿವರ ಪಾತ್ರ ಕಾಣಿಸ್ತಾ ಇಲ್ಲ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ‌ ಚೇಲಗಳೇ ತುಂಬಿ ಹೋಗಿದ್ರು. ನಾಚಿಕೆ ಮರ್ಯಾದೆ ಇದ್ದರೆ ಸಂಬಂಧಪಟ್ಟವರು ರಾಜೀನಾಮೆ ನೀಡಬೇಕು. ತನಿಖೆ ಘಟನೆಯ ಬಗ್ಗೆ ಆಗಬಾರದು, ಪೂರ್ವಯೋಜನೆ ವಿಫಲತೆ ಬಗ್ಗೆ ಆಗಬೇಕು. ಎಲ್ಲಿ ಹಿರಿಯ ಅಧಿಕಾರಿಗಳು ವೈಫಲ್ಯ ಆಗಿದ್ದಾರೆ, ಯಾವ ರಾಜಕಾರಣಿ ಪಾತ್ರ ಇದೆ ಅಂತ ತಿಳಿಯಬೇಕು ಎಂದು ಒತ್ತಾಯಿಸಿದರು.  ಈ ಘಟನೆಯ ಸೂಕ್ತ ತನಿಖೆ ಆಗಬೇಕು. ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕು. ಇದು ಸಾಮಾನ್ಯ ವಿಚಾರ ಅಲ್ಲ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ