ಕಾರಿನ ಮೇಲೆ ಬಿದ್ದ ಜಾಹೀರಾತು ಫಲಕ: ಮಾಲ್ ಗೆ ಹೋಗುತ್ತಿದ್ದ ತಾಯಿ –ಮಗಳ ದುರಂತ ಅಂತ್ಯ

ಜಾಹೀರಾತು ಫಲಕವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ತಾಯಿ—ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಬಳಿ ಸೋಮವಾರ ನಡೆದಿದೆ.
ಇಂದಿರಾನಗರ ಕಾಲನಿ ನಿವಾಸಿ ಪ್ರೀತಿ ಜಗ್ಗಿ(38) ಹಾಗೂ ಅವರ ಮಗಳು ಏಂಜಲ್(15) ಮೃತಪಟ್ಟವರಾಗಿದ್ದಾರೆ. ಇವರ ಕಾರು ಚಾಲಕ ಸರ್ತಾಜ್ ತೀವ್ರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ತಾಯಿ ಮಗಳು ಮಾಲ್ ಗೆ ಹೊರಟಿದ್ದರು. ಆದರೆ ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಜೋರಾದ ಗಾಳಿ ಬೀಸಿದ ವೇಳೆ ಗಾಳಿಯ ಒತ್ತಡಕ್ಕೆ ಫಲಕವು ಉರುಳಿದೆ. ಇದೇ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು, ಫಲಕ ಬಿದ್ದ ರಭಸಕ್ಕೆ ಕಾರು ಅಪ್ಪಚ್ಚಿಯಾಗಿದೆ. ತಕ್ಷಣವೇ ಕಾರಿನಲ್ಲಿದ್ದವರನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲಾಯ್ತು. ಆದ್ರೆ, ದಾರಿ ಮಧ್ಯೆಯೇ ತಾಯಿ ಮಗಳು ಸಾವನ್ನಪ್ಪಿದ್ದಾರೆ.
ಇನ್ನೂ, ಎರಡು ಜೀವಗಳನ್ನು ಬಲಿ ಪಡೆದಿರುವ ಜಾಹೀರಾತು ಫಲಕ ಒರಂಗಿಸ್ ಅಡ್ವರ್ಟೈಸಿಂಗ್ ಕಂಪೆನಿದ್ದಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw