ಮಹಾಮಳೆಗೆ ಕೊಚ್ಚಿ ಹೋದ ರೈಲು ಹಳಿ: ಭಾರೀ ಅಪಾಯದಿಂದ ಪಾರಾದ ಪ್ಯಾಸೆಂಜರ್ ರೈಲು

ಚಿಕ್ಕಮಗಳೂರು: ಕಾಫಿನಾಡ ಮಹಾಮಳೆಯಿಂದಾಗಿ ನಡೆಯಬೇಕಿದ್ದ ಭಾರೀ ಅವಾಂತರವೊಂದು ತಪ್ಪಿದ್ದು, ನೂರಾರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಸುರಿದ ಧಾರಾಕಾರ ಮಳೆಗೆ ರೈಲ್ವೆ ಹಳಿ ಕೊಚ್ಚಿ ಹೋಗಿದ್ದು, ಪರಿಣಾಮವಾಗಿ ಬೇಸ್ ಗಳು ಲಯ ತಪ್ಪಿವೆ. ರೈಲ್ವೆ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ.
ಚಿಕ್ಕಮಗಳೂರು ತಾಲೂಕಿನ ಕಣಿವೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಧಾರಾಕಾರ ಮಳೆಯ ನಡುವೆ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲು ಹೊರಟಿತ್ತು. ಇತ್ತ ಕಣಿವೆ ಗ್ರಾಮದ ಬಳಿ ರೈಲು ಹಳಿ ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಈ ವಿಚಾರ ತಿಳಿದು ಕಣಿವೆ ರೈಲ್ವೆ ಸ್ಟೇಷನ್ ಸಿಬ್ಬಂದಿ ತಕ್ಷಣವೇ ರೈಲು ಚಾಲಕನಿಗೆ ಮಾಹಿತಿ ನೀಡಿದ್ದು, ಮಾಹಿತಿ ತಿಳಿದು ರೈಲು ಚಾಲಕ ರೈಲು ನಿಲ್ಲಿಸಿದ್ದರಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ.
ನಂತರ ಸಿಬ್ಬಂದಿ ಹಳಿ ದುರಸ್ತಿ ಪಡಿಸಿದ್ದು, 30 ನಿಮಿಷಗಳ ನಂತರ ರೈಲು ಮತ್ತೆ ಎಂದಿನಂತೆ ತನ್ನ ಪ್ರಯಾಣ ಆರಂಭಿಸಿದೆ. ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD