ಶಿವಮೊಗ್ಗ ಘಟನೆ ಹೇಳಿಕೆ ಬಗ್ಗೆ ಉಲ್ಟಾ ಹೊಡೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ! - Mahanayaka
6:20 PM Tuesday 16 - September 2025

ಶಿವಮೊಗ್ಗ ಘಟನೆ ಹೇಳಿಕೆ ಬಗ್ಗೆ ಉಲ್ಟಾ ಹೊಡೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ!

ramalinga reddy
06/10/2023

ಮಂಗಳೂರು: ಬಿಜೆಪಿ ವೇಷ ಮರೆಸಿ ಮಾಡುತ್ತೆ ಎನ್ನುವ ಹೇಳಿಕೆಯನ್ನ ಶಿವಮೊಗ್ಗ ಘಟನೆ ಆಧರಿಸಿ ಹೇಳಿಲ್ಲ ಎಂದು ಶಿವಮೊಗ್ಗ ಘಟನೆ ಹೇಳಿಕೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉಲ್ಟಾ ಹೊಡೆದಿದ್ದಾರೆ.


Provided by

ಮಂಗಳೂರು ಏರ್ಪೋರ್ಟ್ ನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಆ ರೀತಿ ನಾನು ಹೇಳಿಲ್ಲ, ಶಿವಮೊಗ್ಗದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ, ಬಿಜೆಪಿಯವರು ಜನರಲ್ ಆಗಿ ಯಾವ ರೀತಿ ಮಾಡ್ತಾರೆ ಅಂತ ಹೇಳಿದ್ದೆ ಅಷ್ಟೇ. ನಾನು ಶಿವಮೊಗ್ಗ ಘಟನೆ ಆಧರಿಸಿ ಈ ರೀತಿ ಹೇಳಿಲ್ಲ, ಅವರು ಸಾಮಾನ್ಯವಾಗಿ ಆ ರೀತಿ ಮಾಡ್ತಾರೆ ಅಂದಿದ್ದೆ ಎಂದರು.

ಬಿಜೆಪಿ ವೇಷ ಮರೆಸಿ ಮಾಡುತ್ತೆ ಅಂದಿದ್ದು ಹಳೆಯ ಘಟನೆಗಳ ಬಗ್ಗೆ. ಶಿವಮೊಗ್ಗ ಘಟನೆಯಲ್ಲಿ ಯಾರೇ ತಪ್ಪು ಮಾಡಿದ್ರೂ‌ ಕ್ರಮ ತೆಗೆದುಕೊಳ್ಳಲಿ. ಶಿವಮೊಗ್ಗ ಮತ್ತು ನನ್ನ ಹೇಳಿಕೆಗೆ ಯಾವುದೇ ಸಂಬಂಧ ಇಲ್ಲ. ಕಾನೂನಿನಿಗಿಂತ ದೊಡ್ಡವರು ಯಾರೂ ಇಲ್ಲ, ತಪ್ಲು ಮಾಡಿದವ್ರ ಮೇಲೆ ಕ್ರಮ ಆಗಲಿ ಎಂದು ಅವರು ಹೇಳಿದರು.

ಹಿಂದೆ ಪುಲಿಕೇಶಿ ನಗರ ಗಲಾಟೆಯಲ್ಲೂ ನಾನು ಅದೇ ಹೇಳಿದ್ದೆ. ನಾನು ಗೃಹಮಂತ್ರಿ ಆಗಿದ್ದವನು, ನನಗೆ ಕಾನೂನು ಗೊತ್ತಿಲ್ವಾ?  ಎಂದರು ಪ್ರಶ್ನಿಸಿದರು.

ರೈತರು, ಕನ್ನಡಪರ ಹೋರಾಟಗಾರು ಹಾಗೂ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರರ ಕೇಸ್ ವಾಪಾಸ್ ಪಡೀತಿವಿ, ಆಸ್ತಿ ಪಾಸ್ತಿ ನಷ್ಟ ಆಗಿರಬಾರದು, ಪೊಲೀಸರ ಮೇಲೆ ಹಲ್ಲೆ ಆಗದ ಕೇಸ್ ಗಳು, ಇಂಥವುಗಳನ್ನು ಮಾತ್ರ ನಾವು ವಾಪಸ್ ಪಡೆಯಲು ಶಿಫಾರಸ್ಸು ಮಾಡ್ತೇವೆ. ಅದು ಬಿಟ್ಟರೆ ಕೋಮು ಗಲಭೆ ಕೇಸ್ ಗಳಲ್ಲಿ ಶಿಫಾರಸ್ಸು ಮಾಡಲ್ಲ ಎಂದರು.

ಇನ್ನೂ  ಶಾಸಕ ಚನ್ನಬಸಪ್ಪ ಹೇಳಿಕೆಗೆ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ ರಾಮಲಿಂಗಾ ರೆಡ್ಡಿ, ನನಗೆ ತಾಕತ್ತಿದ್ಯೋ ಇಲ್ವೋ ಅಂಥ ಅವನಿಗೆ ಏನ್ ಗೊತ್ತು?ನನಗೆ ಏಕವಚನದಲ್ಲಿ ಬೈಯ್ಯೋಕೆ ಗೊತ್ತಿಲ್ಬಾ? ಆದ್ರೆ ನಾನು ಬೈಯ್ಯೋಕೆ ಆಗಲ್ಲ. ಮಾತಿನ ಗೌರವ, ರೀತಿ ವಿಧಾನ ಗೊತ್ತಿಲ್ಲಾಂದ್ರೆ ನಾನು ಹಾಗೆ ಮಾಡಲು ಆಗಲ್ಲ ಅವರ ಮಟ್ಟಕ್ಕೆ ನಾವು ಇಳಿಯೋಕೆ ಆಗಲ್ಲ ಎಂದರು.

ಇತ್ತೀಚಿನ ಸುದ್ದಿ