ಕ್ಯಾಸಿನೋಗಾಗಿ ಕಳ್ಳತನ ಮಾಡುತ್ತಿದ್ದ ಮೂವರು ಪೊಲೀಸರ ಬಲೆಗೆ
ಬೆಂಗಳೂರು: ಕ್ಯಾಸಿನೋಗಾಗಿ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಮಾಗಡಿ ರಸ್ತೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.45 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಆಸೀಫ್ ಹಾಗೂ ಆತನ ಇಬ್ಬರೂ ಸಹಚರರನ್ನು ಬಂಧಿಸಲಾಗಿದೆ. 2017ರಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ವಿದ್ಯಾರಣ್ಯಪುರ ಪೊಲೀಸರಿಂದ ಅರೆಸ್ಟ್ ಆಗಿದ್ದ ಆಸೀಫ್ ಬಿಡುಗಡೆ ಬಳಿಕ ಊರು ಬಿಟ್ಟು ಹುಬ್ಬಳ್ಳಿ – ಧಾರವಾಡ ಸೇರಿದ್ದ. ಧಾರವಾಡದಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಕ್ಯಾಸಿನೋ ಬಲೆಗೆ ಬಿದ್ದು ಹಣಕ್ಕಾಗಿ ಕಳ್ಳತನ ಎಸಗುತ್ತಿದ್ದರು.
ಬಳಿಕ ಹುಬ್ಬಳ್ಳಿ ಪೊಲೀಸರಿಗೆ ಸಿಕ್ಕಿ ಜೈಲು ಸೇರಿದ್ದ ಆಸೀಫ್ ಆರು ವರ್ಷದ ನಂತರ ಬೆಂಗಳೂರಿಗೆ ಮರಳಿ ಬಂದಿದ್ದ.ಆದರೂ ತನ್ನ ಹಳೆಯ ಕಸುಬನ್ನು ಬಿಡದೇ ಜೊತೆಗಾರರಾದ ಶಬೀರ್ ಹಾಗೂ ನೌಸದ್ ಜೊತೆಗೂಡಿ ಕಳ್ಳತನ ಎಸಗುತ್ತಿದ್ದ.
ಆರೋಪಿಗಳು ಹಣಕ್ಕಾಗಿ ಮಾಗಡಿರಸ್ತೆಯ ಕಾರ್ಖಾನೆಯೊಂದರ ಕಚೇರಿಗೆ ನುಗ್ಗಿ ದೋಚಿದ್ದರು. ಕಳ್ಳತನ ಮಾಡಿದ್ದ ಆರೋಪಿಗಳನ್ನು ಸಿಸಿಟಿವಿ ದೃಶ್ಯ ಆಧರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























