ರಾಮರಾಜ್ಯದಲ್ಲಿ ಆದಿವಾಸಿಗಳ ಕಣ್ಣೀರಿಗೆ ಬೆಲೆ ಇಲ್ಲ: ಸಿಎಂ ಆಗಿ 5 ವರ್ಷ ಪೂರೈಸಲು ಬಿಜೆಪಿಯವರು ಬಿಡುವುದಿಲ್ಲವೆಂದು ನನಗೆ ಗೊತ್ತಿತ್ತು ಎಂದ ಹೇಮಂತ್ ಸೊರೇನ್ - Mahanayaka

ರಾಮರಾಜ್ಯದಲ್ಲಿ ಆದಿವಾಸಿಗಳ ಕಣ್ಣೀರಿಗೆ ಬೆಲೆ ಇಲ್ಲ: ಸಿಎಂ ಆಗಿ 5 ವರ್ಷ ಪೂರೈಸಲು ಬಿಜೆಪಿಯವರು ಬಿಡುವುದಿಲ್ಲವೆಂದು ನನಗೆ ಗೊತ್ತಿತ್ತು ಎಂದ ಹೇಮಂತ್ ಸೊರೇನ್

05/02/2024


Provided by

ನಾನು ಸಿಎಂ ಆಗಿ ಐದು ವರ್ಷಗಳ ಅವಧಿ ಪೂರೈಸಲು ಬಿಜೆಪಿಯವರು ಬಿಡುವುದಿಲ್ಲ ಎಂದು ನನಗೆ ಮೊದಲೇ ಗೊತ್ತಿತ್ತು. ಈಗ ಅದರಂತೆಯೇ ನಡೆದಿದೆ ಎಂದು ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್‌ ಸೊರೇನ್‌ ಹೇಳಿದ್ದಾರೆ. ಆದಿವಾಸಿಗಳ ಕಣ್ಣೀರಿಗೆ ಈ ದೇಶದಲ್ಲಿ ಬೆಲೆ ಇಲ್ಲ. ಹೀಗಾಗಿ ನಾನು ಕಣ್ಣೀರು ಹಾಕುವುದಿಲ್ಲ ಎಂದು ಸೊರೇನ್‌ ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆಯ ಆರೋಪದ ಮೇಲೆ ಇ.ಡಿ. ಅಧಿಕಾರಿಗಳಿಂದ ಹೇಮಂತ್‌ ಸೊರೇನ್‌ ಬಂಧಿತರಾಗಿದ್ದರು. ನೂತನವಾಗಿ ಸಿಎಂ ಸ್ಥಾನ ಅಲಂಕರಿಸಿದ ಚಂಪಿ ಸೊರೇನ್‌ ಇಂದು ವಿಶ್ವಾಸ ಮತ ಸಾಬೀತು ಪಡಿಸಲಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳ ಭದ್ರತೆಯಲ್ಲಿ ಅವರು ಸದನಕ್ಕೆ ಆಗಮಿಸಿದರು.

ಸದನವನ್ನು ಉದ್ದೇಶಿಸಿ ಮಾತನಾಡಿದ ಹೇಮಂತ್‌ ಸೊರೇನ್‌, ಜ.31 ( ಅವರನ್ನು ಬಂಧಿಸಿದ ದಿನ) ಪ್ರಜಾಪ್ರಭುತ್ವದ ಪಾಲಿಗೆ ಕರಾಳ ದಿನವಾಗಿದೆ. ನನ್ನನ್ನು ಬಂಧಿಸುವ ಹುನ್ನಾರದಲ್ಲಿ ರಾಜಭವನ ಸಹ ಪಿತೂರಿ ನಡೆಸಿದೆ ಎಂದು ಆರೋಪಿಸಿದರು.

ಏಳು ಎಕರೆ ಭೂಮಿಯನ್ನು ಅಕ್ರಮವಾಗಿ ಹೊಂದಿರುವ ಆರೋಪ ನನ್ನ ಮೇಲಿದೆ. ಅದು ನನ್ನ ಹೆಸರಿನಲ್ಲಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸೊರೇನ್‌ ಹೇಳಿದ್ದಾರೆ.

ಇತ್ತೀಚಿನ ಸುದ್ದಿ