ಐಸ್ ಕ್ರೀಮ್ ತೆಗೆದುಕೊಂಡು ಬರುವಾಗ ಡಿಕ್ಕಿ ಹೊಡೆದ ಟ್ರ್ಯಾಕ್ಟರ್: ಬಾಲಕ ಸಾವು - Mahanayaka

ಐಸ್ ಕ್ರೀಮ್ ತೆಗೆದುಕೊಂಡು ಬರುವಾಗ ಡಿಕ್ಕಿ ಹೊಡೆದ ಟ್ರ್ಯಾಕ್ಟರ್: ಬಾಲಕ ಸಾವು

buvan
13/06/2023

ಬೆಂಗಳೂರು: ಅಣ್ಣನ ಜೊತೆ ಬೇಕರಿಯಲ್ಲಿ ಐಸ್ ಕ್ರೀಮ್ ತೆಗೆದುಕೊಂಡು ಬರುವಾಗ ಟ್ರ್ಯಾಕ್ಟರ್ ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದು ಬಾಲಕ ಸಾವಿಗೀಡಾಗಿರುವ ದಾರುಣ ಘಟನೆ ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ ಸಮೀಪದ ಸಿಕೆ ಪಾಳ್ಯದಲ್ಲಿ ನಡೆದಿದೆ.

ಭುವನ್ ತನ್ನ ಅಣ್ಣನ ಜೊತೆ ಬೇಕರಿಯಲ್ಲಿ ಐಸ್ ಕ್ರೀಮ್ ತೆಗೆದುಕೊಂಡು ಬರುವಾಗ ವಾಟರ್ ಟ್ಯಾಂಕರ್ ಬಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಮೃತಪಟ್ಟಿದ್ದಾನೆ.

ಬಾಲಕ ಭುವನ್ (4) ಮೃತಪಟ್ಟ ದುರ್ದೈವಿ. ಚಾಲಕ ಕುಡಿದ ಮತ್ತಿನಲ್ಲಿ ಟ್ರ್ಯಾಕ್ಟರ್ ವಾಟರ್ ಟ್ಯಾಂಕರ್ ಚಲಾಯಿಸಿದ್ದ ಎನ್ನಲಾಗಿದೆ. ಅಪಘಾತವಾಗುತ್ತಿದ್ದಂತೆ ಟ್ಯಾಂಕರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ