ಟ್ರಂಪ್ ಎರಡನೇ ಬಾರಿಗೆ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ! - Mahanayaka

ಟ್ರಂಪ್ ಎರಡನೇ ಬಾರಿಗೆ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ!

trump
06/11/2024


Provided by

ಅಮೆರಿಕಾದ ಅಧ್ಯಕ್ಷೀಯ ಚುನಾವಣೆ 2024 ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದ್ದು, ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರೀ ಮುನ್ನಡೆ ಸಾಧಿಸಿದ್ದಾರೆ.

ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರನ್ನು ಹಿಂದಿಕ್ಕಿ ಟ್ರಂಪ್‌ ಗೆಲುವಿನತ್ತ ಮುನ್ನುಡಿ ಇಡುತ್ತಿದ್ದಾರೆ. ಬಹುತೇಕ ಎಲ್ಲಾ ಚುನಾವಣೆ ಸಮೀಕ್ಷೆಗಳು ಟ್ರಂಪ್‌ ಪರವಾಗಿಯೇ ಇವೆ ಹೀಗಾಗಿ ಟ್ರಂಪ್ ಆಯ್ಕೆ ಸಾಧ್ಯತೆಗಳು ಹೆಚ್ಚಾಗಿವೆ.

ಭಾರತದಲ್ಲಿ ಇದ್ದಂತೆ ಅಮೆರಿಕಾದಲ್ಲೂ ಚುನಾವಣೆ ಬೆಟ್ಟಿಂಗ್‌ ಭರಾಟೆ ಶುರುವಾಗಿದೆ.  ಅಮೆರಿಕಾದಲ್ಲಿ ಪಾಲಿಮಾರ್ಕೆಟ್‌ ಎಂದು ಕರೆಯಲ್ಪಡುವ ಈ ಬೆಟ್ಟಿಂಗ್‌ ವಲಯವೂ ಡೊನಾಲ್ಡ್ ಟ್ರಂಪ್‌ ಅವರೇ ಈ ಬಾರಿ ಗೆಲುವು ಕಾಣಲಿದ್ದಾರೆ.  ಶೇ .69 ರಷ್ಟು ಟ್ರಂಪ್‌ ಅವರೇ ವಿಜಯಶಾಲಿ ಎಂದು ಭವಿಷ್ಯ ನುಡಿದಿವೆ. ಅದರಂತೆಯೇ ಟ್ರಂಪ್‌ ಕೂಡ ಕಮಲಾ ಅವರಿಗಿಂತ ಭಾರೀ ಮುನ್ನಡೆಯನ್ನೇ ಕಾಯ್ದುಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ