ಭಾರತದ ಮೇಲೆ ಶೇ.25ರಷ್ಟು ಟ್ರಂಪ್ ದುಬಾರಿ ತೆರಿಗೆ: ಆ.7ರಿಂದ ಜಾರಿಗೆ - Mahanayaka

ಭಾರತದ ಮೇಲೆ ಶೇ.25ರಷ್ಟು ಟ್ರಂಪ್ ದುಬಾರಿ ತೆರಿಗೆ: ಆ.7ರಿಂದ ಜಾರಿಗೆ

modi trump
01/08/2025


Provided by

ನವದೆಹಲಿ: ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಶೇ.25ರಷ್ಟು ತೆರಿಗೆ ಆ.7ರಿಂದ ಜಾರಿಯಾಗಲಿದೆ. ಇದರಿಂದ, ಅಮೆರಿಕನ್ನರು ಖರೀದಿಸುವ ಭಾರತೀಯ ಉತ್ಪನ್ನಗಳು ದುಬಾರಿಯಾಗಲಿವೆ.

ಅತ್ತ, ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ತೈಲವನ್ನು ತರಿಸಿಕೊಳ್ಳುತ್ತಿರುವುದಕ್ಕೆ ದಂಡ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರಾದರೂ, ಅದರ ಮೊತ್ತವನ್ನು ಇನ್ನೂ ಘೋಷಿಸಿಲ್ಲ. ಈ ಪರಿಣಾಮ ಅಮೆರಿಕದಲ್ಲಿ ಭಾರತದ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಆರ್ಥಿಕತೆ ಮೇಲೆ ಪರಿಣಾಮದ ಸಾಧ್ಯತೆ ಇದೆ.

ಭಾರತದ ಜತೆಗಿನ ವ್ಯಾಪಾರ ಒಪ್ಪಂದ ಮಾತುಕತೆ ನಿರೀಕ್ಷಿತ ಪ್ರಗತಿ ಸಾಧಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಭವನ ಪ್ರಕಟಿಸಿದೆ.

ಆಗಸ್ಟ್ 7ರಿಂದ ಹೊಸ ಸುಂಕ ಜಾರಿಗೆ ಬರಲಿದ್ದು, 70 ದೇಶಗಳು ಹಾಗೂ ಯೂರೋಪಿಯನ್ ಒಕ್ಕೂಟದ 27 ಸದಸ್ಯ ದೇಶಗಳಿಗೆ ಇದು ಅನ್ವಯವಾಗಲಿದೆ. ಈ ಆದೇಶದಲ್ಲಿ ಹೆಸರಿಸದ ದೇಶಗಳು ನಿಗದಿತ ಶೇಕಡ 10ರ ಸುಂಕ ಎದುರಿಸಲಿವೆ ಎಂದು ಆದೇಶದಲ್ಲಿ ಸ್ಪಷ್ಟಪಡಿಲಾಗಿದೆ.

ಯುರೋಪಿಯನ್ ಒಕ್ಕೂಟಕ್ಕೆ ಶೇ.15 ಕ್ಕಿಂತ ಹೆಚ್ಚಿನ ಅಮೆರಿಕಾ ಸುಂಕ ದರಗಳನ್ನು ಹೊಂದಿರುವ ಸರಕುಗಳಿಗೆ ಹೊಸ ಸುಂಕಗಳಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ, ಶೇ.15ಕ್ಕಿಂತ ಕಡಿಮೆ ಸುಂಕ ದರಗಳನ್ನು ಹೊಂದಿರುವ ಸರಕುಗಳ ತೆರಿಗೆಗಳನ್ನು ಪ್ರಸ್ತುತ ಸುಂಕ ದರದಿಂದ ಶೇ.15ರಷ್ಟು ಕಡಿಮೆ ಮಾಡಲು ಹೊಂದಿಸಲಾಗುತ್ತದೆ ಎಂದು ತಿಳಿಸಿದೆ.

ಹೊಸ ಸುಂಕಗಳನ್ನು ಜಾರಿಗೆ ತರುವ ಮೊದಲು ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲು ಟ್ರಂಪ್ ಆರಂಭದಲ್ಲಿ ಆಗಸ್ಟ್ 1ರ ಗಡುವನ್ನು ನಿಗದಿಪಡಿಸಿದ್ದರು. ಈಗ ಪರಿಷ್ಕೃತ ಪಾರಸ್ಪರಿಕ ಸುಂಕಗಳನ್ನು ಎದುರಿಸುತ್ತಿರುವ 70ಕ್ಕೂ ಹೆಚ್ಚು ದೇಶಗಳಿಗೆ, ಆದೇಶಕ್ಕೆ ಸಹಿ ಹಾಕಿದ ಏಳು ದಿನಗಳ ನಂತರ ಹೊಸ ದರಗಳು ಜಾರಿಗೆ ಬರುತ್ತವೆ ಎಂದು ತಿಳಿಸಲಾಗಿದೆ.

ಆದಾಗ್ಯೂ, ಇಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದ್ದು. ಆಗಸ್ಟ್ 7 ರೊಳಗೆ ಹಡಗುಗಳಿಗೆ ಲೋಡ್ ಮಾಡಲಾದ ಮತ್ತು ಅಕ್ಟೋಬರ್ 5 ರೊಳಗೆ ಅಮೆರಿಕವನ್ನು ತಲುಪುವ ಸರಕುಗಳು ಹೊಸ ದರಗಳಿಗೆ ಒಳಪಡುವುದಿಲ್ಲ ಎಂದು ತಿಳಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ