ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿ: ಓರ್ವ ಸಾವು ಹಲವರಿಗೆ ಗಂಭೀರ ಗಾಯ - Mahanayaka
10:30 PM Tuesday 4 - November 2025

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿ: ಓರ್ವ ಸಾವು ಹಲವರಿಗೆ ಗಂಭೀರ ಗಾಯ

kaduru
15/05/2024

ಕಡೂರು: ಡೀಸೆಲ್ ಖಾಲಿಯಾಗಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿ,  13 ಮಂದಿ ಗಾಯಗೊಂಡ ಘಟನೆ  ರಾಷ್ಟ್ರೀಯ ಹೆದ್ದಾರಿಯ ಯುನಿವರ್ಸಿಟಿ ಸಮೀಪದ ಬ್ರಿಡ್ಜ್ ಬಳಿ ಬುಧವಾರ ಬೆಳಗ್ಗೆ  ನಡೆದಿದೆ.

ಮಂಜುನಾಥ(40)  ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಹಾಸನ ತಾಲೂಕಿನ ವಂಗೆರೆ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.  ಘಟನೆಯಲ್ಲಿ  3 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹಾಸನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಟಿಯಲ್ಲಿದ್ದ ರಂಗಪ್ಪ, ಅಶ್ವಿನಿ, ಲಕ್ಷ್ಮಿ, ಭೂಮಿಕ, ನಾಗರಾಜು, ರುಕ್ಮಿಣಿ, ಪ್ರೀತಮ್, ಸಾಗರ್, ದೊರೆಸ್ವಾಮಿ, ಸಂಜಯ್ ಅವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಟಿ ಚಾಲಕ ಮಣಿ ಕುಮಾರ್ ಅವರಿಗೂ ಪೆಟ್ಟಾಗಿದ್ದು ಕಡೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ