ರಾಹುಲ್ ಗಾಂಧಿಯ ಟ್ವಿಟ್ಟರ್ ಖಾತೆಯನ್ನು ಅನ್ ಲಾಕ್ ಮಾಡಿದ ಟ್ವಿಟ್ಟರ್! - Mahanayaka
8:24 AM Thursday 16 - October 2025

ರಾಹುಲ್ ಗಾಂಧಿಯ ಟ್ವಿಟ್ಟರ್ ಖಾತೆಯನ್ನು ಅನ್ ಲಾಕ್ ಮಾಡಿದ ಟ್ವಿಟ್ಟರ್!

rahul gandhi
14/08/2021

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಗುರುತನ್ನು ಬಹಿರಂಗಪಡಿಸಿದ ಆರೋಪದಡಿ ಲಾಕ್‌ ಮಾಡಲಾಗಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟ್ವಿಟರ್‌ ಖಾತೆಯನ್ನು ಒಂದು ವಾರದ ಬಳಿಕ, ಶನಿವಾರ ಅನ್‌ ಲಾಕ್‌ ಮಾಡಲಾಗಿದೆ.


Provided by

ಕಳೆದ ವಾರ ರಾಹುಲ್ ಗಾಂಧಿ ಆಕ್ಷೇಪಾರ್ಹ ಫೋಟೋವನ್ನು ಹಂಚಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಟ್ವಿಟ್ಟರ್ ಲಾಕ್ ಮಾಡಿತ್ತು. ರಾಹುಲ್ ಗಾಂಧಿ ಟ್ವಿಟ್ಟರ್ ಬ್ಲಾಕ್ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನೂ ಈ ಬಗ್ಗೆ ಯೂಟ್ಯೂಬ್ ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದ ರಾಜಕಾರಣದಲ್ಲಿ ಟ್ವಿಟರ್‌ ಹಸ್ತಕ್ಷೇಪ ಮಾಡುತ್ತಿದೆ. ನನ್ನ ಟ್ವಿಟರ್‌ ಖಾತೆಯನ್ನು ಲಾಕ್‌ ಮಾಡಿರುವುದು ದೇಶದ ಪ್ರಜಾಸತ್ತಾತ್ಮಕ ರಚನೆಯ ಮೇಲೆ ನಡೆಸಿದ ದಾಳಿ ಎಂದು ಹೇಳಿದ್ದರು.

ಟ್ವಿಟರ್‌ ಪಕ್ಷಪಾತಿಯಾಗಿದೆ ಎಂದು ರಾಹುಲ್ ಗಾಂಧಿ ದೂರಿದ ಬೆನ್ನಲ್ಲೇ ಶನಿವಾರ ಅವರ ಟ್ವಿಟ್ಟರ್ ಖಾತೆಯನ್ನು ಅನ್ ಲಾಕ್ ಮಾಡಲಾಗಿದೆ. ಜೊತೆಗೆ ಸಂತ್ರಸ್ತೆ ಕುಟುಂಬದ ಸದಸ್ಯರ ಫೋಟೋ ಹಂಚಿಕೊಂಡ ಇತರರ ಖಾತೆಗಳನ್ನೂ ಮರು ಸ್ಥಾಪಿಸಲಾಗಿದೆ.’

ಇನ್ನಷ್ಟು ಸುದ್ದಿಗಳು…

ಬಿಜೆಪಿ ಕಾರ್ಯಕರ್ತ ಸೇರಿದಂತೆ ಇಬ್ಬರಿಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!

ಮುಸ್ಲಿಮ್ ಕಲಾವಿದರಿಂದ ಮೆಹೆಂದಿ ಹಚ್ಚಿಸಿಕೊಳ್ಳಬಾರದು | ಮೆಹೆಂದಿ ಸ್ಟಾಲ್ ಗೆ ಕರ್ಣಿಸೇನೆ ದಾಳಿ

ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯುತ್ತೇವೆ | ದಲಿತ ಸಿಎಂ ಮಾಡ್ತೇವೆ- ಸಚಿವ ಈಶ್ವರಪ್ಪ ಹೇಳಿಕೆ

ನೀರಜ್ ಚೋಪ್ರಾರನ್ನು ಅನುಕರಿಸಿ ರೋಡಲ್ಲಿ ನಿಂತು ಈಟಿ ಎಸೆದ ರಾಖಿ ಸಾವಂತ್ | ಮುಂದೇನಾಯ್ತು?

ಇತ್ತೀಚಿನ ಸುದ್ದಿ