ವಿಮಾನದಲ್ಲಿ ಹೋಗುತಿದ್ದ ವೇಳೆ ಉಸಿರಾಟದ ತೊಂದರೆ: ಮಗುವನ್ನು ರಕ್ಷಿಸಿದ ಸಹಪ್ರಯಾಣಿಕರು - Mahanayaka
10:55 AM Thursday 21 - August 2025

ವಿಮಾನದಲ್ಲಿ ಹೋಗುತಿದ್ದ ವೇಳೆ ಉಸಿರಾಟದ ತೊಂದರೆ: ಮಗುವನ್ನು ರಕ್ಷಿಸಿದ ಸಹಪ್ರಯಾಣಿಕರು

01/10/2023


Provided by

ರಾಂಚಿ ದೆಹಲಿ ವಿಮಾನದಲ್ಲಿ ತೆರಳುತ್ತಿದ್ದ ವೇಳೆ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಮಗುವನ್ನು ಸಹಪ್ರಯಾಣಿಕರಾಗಿದ್ದ ಇಬ್ಬರು ವೈದ್ಯರು ರಕ್ಷಿಸಿದ ಘಟನೆ ನಡೆದಿದೆ.

ಐಎಎಸ್ ಅಧಿಕಾರಿ ಡಾ.ನಿತಿನ್ ಕುಲಕರ್ಣಿ ಮತ್ತು ರಾಂಚಿ ಸದರ್ ಆಸ್ಪತ್ರೆಯ ವೈದ್ಯ ಮೊಝಮ್ಮಿಲ್ ಫಿರೋಜ್ ತುರ್ತು ವೈದ್ಯಕೀಯ ಸಹಾಯವಾಗಿ ವಯಸ್ಕರಿಗೆ ಮೀಸಲಾದ ಮಾಸ್ಕ್ ಮತ್ತು ಇತರ ಔಷಧಿಗಳನ್ನು ಬಳಸಿ ಆಮ್ಲಜನಕವನ್ನು ಪೂರೈಸಿದರು. ಒಂದು ಗಂಟೆಯ ನಂತರ ವಿಮಾನ ಲ್ಯಾಂಡ್ ಆದ ನಂತರ ವೈದ್ಯಕೀಯ ತಂಡವು ಮಗುವನ್ನು ತಮ್ಮ ಆರೈಕೆಗೆ ತೆಗೆದುಕೊಂಡು ಆಮ್ಲಜನಕವನ್ನು ಒದಗಿಸಿತು. ಮಗುವಿನ ಹೃದಯ ಕಾಯಿಲೆಯ ಚಿಕಿತ್ಸೆಗಾಗಿ ಪೋಷಕರು ಮಗುವನ್ನು ದೆಹಲಿಯ ಏಮ್ಸ್‌ಗೆ ಕರೆದೊಯ್ಯುತ್ತಿದ್ದರು.

ದೆಹಲಿಗೆ ಹಾರಿದ ಇಪ್ಪತ್ತು ನಿಮಿಷಗಳ ನಂತರ ಇಂಡಿಗೋ ವಿಮಾನದ ಸಿಬ್ಬಂದಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ತೊಂದರೆಯಲ್ಲಿರುವ ಮಗುವಿಗೆ ವಿಮಾನದಲ್ಲಿದ್ದ ವೈದ್ಯರಿಂದ ವೈದ್ಯಕೀಯ ನೆರವು ಕೇಳಿದರು. ಪ್ರಸ್ತುತ ಜಾರ್ಖಂಡ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಕುಲಕರ್ಣಿ ಮತ್ತು ರಾಂಚಿಯ ಸದರ್ ಆಸ್ಪತ್ರೆಯ ಡಾ. ಮೊಝಮ್ಮಿಲ್ ಫಿರೋಜ್ ಮಗುವನ್ನು ಉಳಿಸಲು ಮುಂದೆ ಬಂದರು.

ಮಗು ಏದುಸಿರು ಬಿಡುತ್ತಿದ್ದರಿಂದ ತಾಯಿ ಅಳುತ್ತಿದ್ದರು. ನಾನು ಮತ್ತು ಡಾ. ಮೊಝಮ್ಮಿಲ್ ಮಗುವಿನ ಚಿಕಿತ್ಸೆಗೆ ಮುಂದಾದೆವು. ಕೂಡಲೇ ಅಲ್ಲಿದ್ದ ತುರ್ತು ಆಮ್ಲಜನಕದ ಮಾಸ್ಕ್ ಅನ್ನು ಮಗುವಿಗೆ ಆಳವಡಿಸಿದೆವು. ನಾವು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದೆ. ಮಗು ಜನ್ಮಜಾತ ಹೃದಯ ಕಾಯಿಲೆ, ಪೇಟೆಂಟ್ ಡಕ್ಟಸ್ ಆರ್ಟೆರಿಯೊಸಸ್ (ಪಿಡಿಎ) ಯಿಂದ ಬಳಲುತ್ತಿತ್ತು. ಇದಕ್ಕಾಗಿ ಅವರು ಏಮ್ಸ್‌ಗೆ ಹೋಗುತ್ತಿದ್ದರು ಎಂದು ನಿತಿನ್ ಕುಲಕರ್ಣಿ ಹೇಳಿದರು.

ಮೊದಲ 15-20 ನಿಮಿಷಗಳು ಬಹಳ ನಿರ್ಣಾಯಕ ಮತ್ತು ಒತ್ತಡದಿಂದ ಕೂಡಿತ್ತು. ಕೊನೆಗೂ ಕಣ್ಣುಗಳು ಸಹಜ ಸ್ಥಿತಿಗೆ ಮರಳಿದವು. ಮಗು ಸಹ ಶಬ್ದ ಮಾಡಿತು. ನಂತರ ನಾವು ಸಮಾಧಾನಗೊಂಡೆವು ಎಂದು ಕುಲಕರ್ಣಿ ಹೇಳಿದರು.

 

“ನಾವು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಮಗು ಪೇಟೆಂಟ್ ಡಕ್ಟಸ್ ಆರ್ಟೆರಿಯೋಸಸ್ (ಪಿಡಿಎ) ಎಂಬ ಜನ್ಮಜಾತ ಹೃದಯ ಸ್ಥಿತಿಯಿಂದ ಬಳಲುತ್ತಿತ್ತು. ಅದಕ್ಕಾಗಿ ಅವರು ಏಮ್ಸ್ ಗೆ ಹೋಗುತ್ತಿದ್ದರು” ಎಂದು ಅವರು ಹೇಳಿದರು.

ಡ್ರಗ್ಸ್ ಕಿಟ್ ನಿಂದ ಥಿಯೋಫಿಲಿನ್ ಚುಚ್ಚುಮದ್ದನ್ನು ನೀಡಲಾಯಿತು, ಪೋಷಕರು ಡೆಕ್ಸೋನಾ ಚುಚ್ಚುಮದ್ದನ್ನು ಹೊಂದಿದ್ದರು ಮತ್ತು ಅದು ತುಂಬಾ ಸಹಾಯಕವಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ