ಮಹಾರಾಷ್ಟ್ರದಲ್ಲಿ 10 ನಿಮಿಷಗಳಲ್ಲಿ 4.5, 3.6 ತೀವ್ರತೆಯ ಎರಡು ಕಡೆ ಭೂಕಂಪನ

21/03/2024
ಮಹಾರಾಷ್ಟ್ರದ ಹಿಂಗೋಲಿ ನಗರದಲ್ಲಿ ಗುರುವಾರ ಮುಂಜಾನೆ 10 ನಿಮಿಷಗಳ ಅವಧಿಯಲ್ಲಿ ಎರಡು ಭೂಕಂಪಗಳು ಸಂಭವಿಸಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕದಲ್ಲಿ 4.5 ರಷ್ಟಿರುವ ಮೊದಲ ಭೂಕಂಪನವು ಬೆಳಿಗ್ಗೆ 06.08 ರ ಸುಮಾರಿಗೆ ಸಂಭವಿಸಿದೆ. ಇದು ನಗರದಲ್ಲಿ 10 ಕಿ.ಮೀ ಆಳದಲ್ಲಿ ಸಂಭವಿಸಿದೆ.
ಬೆಳಿಗ್ಗೆ 6.19 ರ ಸುಮಾರಿಗೆ ಎರಡನೇ ಭೂಕಂಪನ ಸಂಭವಿಸಿದೆ.
ಇದು ರಿಕ್ಟರ್ ಮಾಪಕದಲ್ಲಿ 3.6 ರಷ್ಟಿದ್ದು, 10 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪದಿಂದಾಗಿ ಯಾವುದೇ ಆಸ್ತಿಪಾಸ್ತಿ ಅಥವಾ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth