ಒಂದೇ ದಿನ ಇಬ್ಬರು ಸಾವು: ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಸಂಸದರ ವಿರುದ್ಧ ಆಕ್ರೋಶ - Mahanayaka

ಒಂದೇ ದಿನ ಇಬ್ಬರು ಸಾವು: ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಸಂಸದರ ವಿರುದ್ಧ ಆಕ್ರೋಶ

bhadra river
25/07/2025


Provided by

ಚಿಕ್ಕಮಗಳೂರು:  ಜೀಪ್ ಸಮೇತ ಯುವಕ ಭದ್ರಾ ನದಿಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹಾಗೂ ಸಂಸದರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೀಪ್ ಸಮೇತ ಭದ್ರಾ ನದಿಗೆ ಯುವಕ ಬಿದ್ದು ಸಾವನ್ನಪ್ಪಿದ್ದಾನೆ, ಇದರಿಂದ ನೊಂದು ಆತನ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಒಂದೇ ದಿನ, ಒಂದೇ ಮನೆಯಲ್ಲಿ ಇಬ್ಬರು ಸತ್ತಿದ್ದಾರೆ,  ಆದರೆ ಸೌಜನ್ಯಕ್ಕೂ ಯಾರೂ ಜನ ಪ್ರತಿನಿಧಿಗಳು ಬಂದಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆಕ್ಕೂ ಯಾವ ಜನಪ್ರತಿನಿಧಿಗಳೂ ಬಂದಿಲ್ಲ,  ನಿನ್ನೆಯಿಂದ ಸಂಜೆಯಿಂದಲೂ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮೃತದೇಹ ಹುಡುಕುತ್ತಿದ್ದರು. ಸುರಿಯುತ್ತಿರೋ ಮಳೆ ಮಧ್ಯೆಯೇ ಭದ್ರೆಯ ಒಡಲಲ್ಲಿ ಶವಕ್ಕಾಗಿ ಶೋಧ ನಡೆಸಲಾಗಿತ್ತು.

ದುಡ್ಡಿದ್ದವರು ಸತ್ರೆ ಜನಪ್ರತಿ ನಿಧಿಗಳು ಓಡೋಡಿ ಬರ್ತಿದ್ರು, ಇವರು ಬಡವರಲ್ವಾ ಏಕೆ ಬರ್ತಾರೆ‌ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಶ್ರೀಮಂತರ ಮಕ್ಕಳಾಗಿದ್ರೆ ಫ್ಲೈಟ್ ನಲ್ಲಿ ಬಂದು ಶವ ಹುಡಕ್ತಿದ್ರು ಈಗ ಯಾರೂ ಇಲ್ಲ  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರೀ ರಭಸದಿಂದ ಹರಿಯುತ್ತಿರೋ ಭದ್ರೆಯ ಒಡಲಲ್ಲಿ ಶವ ಹುಡುಕೋದು ಸವಾಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ಈ ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ