ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರಲ್ಲಿ ಮುಳುಗಿ ಸಾವು! - Mahanayaka
1:49 AM Saturday 25 - October 2025

ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರಲ್ಲಿ ಮುಳುಗಿ ಸಾವು!

hebri crime news
22/10/2023

ಹೆಬ್ರಿ: ನದಿಯಲ್ಲಿ ಸ್ನಾನಕ್ಕೆ ಮಾಡುತ್ತಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಮತ್ತಾವು ಎಂಬಲ್ಲಿ ಅ.21ರಂದು ಸಂಜೆ ನಡೆದಿದೆ.

ಕರ್ಜೆ ನಿವಾಸಿ ಉಮೇಶ್ ಶೆಟ್ಟಿ(48) ಹಾಗೂ ಚಾರಾ ಹುರ್ತುಕೆ ನಿವಾಸಿ ಪ್ರಸ್ತುತ್ ಹೆಗ್ಡೆ(21) ಮೃತ ದುರ್ದೈವಿ. ಇವರಿಬ್ಬರು ಸ್ನಾನಕ್ಕೆಂದು ಮತ್ತಾವು ನದಿಗೆ ತೆರಳಿದ್ದರು.

ಅಲ್ಲಿ ಸ್ನಾನ ಮಾಡುತ್ತಿರುವ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ಪ್ರಸ್ತುತ್ ಹೆಗ್ಡೆ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇತ್ತೀಚಿನ ಸುದ್ದಿ