ಕರಡಿ ದಾಳಿಗೆ ಇಬ್ಬರಿಗೆ ಗಂಭೀರ ಗಾಯ: ಮೋಡ ಕವಿದ ವಾತಾವರಣದ ನಡುವೆ ಕರಡಿ ದಾಳಿ - Mahanayaka
12:44 AM Friday 12 - December 2025

ಕರಡಿ ದಾಳಿಗೆ ಇಬ್ಬರಿಗೆ ಗಂಭೀರ ಗಾಯ: ಮೋಡ ಕವಿದ ವಾತಾವರಣದ ನಡುವೆ ಕರಡಿ ದಾಳಿ

bear attack
21/05/2025

ಮೂಡಿಗೆರೆ: 2025ರ ಮೇ 21ರಂದು ಬೆಳಿಗ್ಗೆ ಸುಮಾರು 10:30 ಗಂಟೆ ಸುಮಾರಿಗೆ, ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬರಡಿ ಗ್ರಾಮದಲ್ಲಿ ಕರಡಿಗಳ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕುಂಬರಡಿ ಗ್ರಾಮದ ನಿವಾಸಿ ವಿನಯ್ ಗೌಡ (40),  ಹಾಗೂ ಅವರೊಂದಿಗೆ ಕೆಲಸ ಮಾಡಲು ಬಂದಿದ್ದ ಗಿಡ್ಡಯ್ಯ ಎಂಬವರು ತೋಟದಲ್ಲಿ ಗೊಬ್ಬರ ಹಾಕುತ್ತಿರುವಾಗ, ಅಚಾನಕವಾಗಿ 2 ಕರಡಿಗಳು ದಾಳಿ ನಡೆಸಿದ್ದು, ಅವರ ತಲೆ, ಬೆನ್ನು ಹಾಗೂ ಕೈಕಾಲುಗಳಿಗೆ ತೀವ್ರ ಗಾಯವಾಗಿರುತ್ತದೆ.

ಗಾಯಾಳುಗಳನ್ನು ತಕ್ಷಣವೇ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೋಟದ ಪ್ರದೇಶದಲ್ಲಿ ದಟ್ಟ ಮಂಜು ಕವಿದ ವಾತಾವರಣವಿದ್ದ ಕಾರಣ ಕರಡಿಗಳ ಅಸ್ತಿತ್ವ ಗಮನಕ್ಕೆ ಬಾರದಿರಬಹುದು ಎಂಬ ಅಂದಾಜು ವ್ಯಕ್ತವಾಗಿದೆ.

ಸ್ಥಳೀಯರು ಕರಡಿ ಮರಿ ಹತ್ತಿರುವ ಶಂಕೆ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ  ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ